
ವಿಟ್ಲ: ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತಗೊಂಡು
7 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಸೇತುವೆಯ ಮೇಲ್ಭಾಗದ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಾಣದ ಹಂತದಲ್ಲಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ವೇಳೆ ಅಳವಡಿಸಿದ್ದ ಕಬ್ಬಿಣದ ರಾಡ್ ಗಳು ಭಾರ ತಾಳಲಾರದೇ ಕೆಳಭಾಗಕ್ಕೆ ಕುಸಿದಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾಂಕ್ರೀಟ್ ಮಿಶ್ರಣ ಹಾಗೂ ಕಬ್ಬಿಣದ ರಾಡ್ ಗಳು ಮಧ್ಯೆ ಸಿಕ್ಕಿ ಹಾಕಿ ಕೊಂಡಿದ್ದು, ನಾಲ್ವರು ಅಪಾಯದ ಮುನ್ಸೂಚನೆ ತಿಳಿಯುತ್ತಿದ್ದಂತೆ ಓಡಿ ತಪ್ಪಿಸಿ ಕೊಂಡರು. ಮೂವರು ಸಿಲುಕಿ ಹಾಕಿಕೊಂಡಿದ್ದು, ಇಬ್ಬರನ್ನು ತಕ್ಷಣ ತೆರವುಗೊಳಿಸಲಾಯಿತು. ಇದರ ಮಧ್ಯೆ ಸಂಪೂರ್ಣವಾಗಿ ಸಿಕ್ಕಿ ಹಾಕಿಕೊಂಡ ಓರ್ವ ಕಾರ್ಮಿಕನನ್ನು ಸ್ಥಳೀಯ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ಎಲ್ಲರನ್ನೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಕೈಗೊಂಡರು.