ಪೈವಳಿಕೆ: ಪೆಲ್ತಡ್ಕ-ಪೆರ್ವೋಡಿ ಸಡಕ್ ರಸ್ತೆಯಲ್ಲಿ ಜರಿದು ಬಿದ್ದ ಗುಡ್ಡ: ವಾಹನ ಸಂಚಾರ ಸಹಿತ ಪಾದಚಾರಿಗಳ ನಡಿಗೆಗೆ ಆತಂಕ

Share with

ಪೈವಳಿಕೆ: ಬಾಯಾರು ಸಮೀಪದ ಕಲ್ಲಗದ್ದೆ-ಸುದೆಂಬಳ ಹಾದು ಹೋಗುವ ಪೆಲ್ತಡ್ಕ-ಪೆರ್ವೋಡಿ ಸಡಕ್ ಯೋಜನೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಬೃಹತ್ ಗಾತ್ರದ ಗುಡ್ಡೆ ಜರಿದು ಬಿದ್ದು ಎರಡು ವರ್ಷ ಕಳೆದಿದ್ದು ಇದರಿಂದ ವಾಹನ ಸಂಚಾರ ಸಹಿತ ಪಾದಚಾರಿಗಳ ನಡಿಗೆಗೆ ಆತಂಕ ಉಂಟಾಗಿದೆ.

ಪೆಲ್ತಡ್ಕ-ಪೆರ್ವೋಡಿ ಸಡಕ್ ಯೋಜನೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಬೃಹತ್ ಗಾತ್ರದ ಗುಡ್ಡೆ ಜರಿದು ಬಿದ್ದಿದೆ.

ಅಲ್ಲದೆ ರಸ್ತೆ ಅಲ್ಲಲ್ಲಿ ಶೋಚನೀಯವಸ್ಥೆಗೆ ತಲುಪಿ ಸಂಚಾರ ದುಸ್ಥರವಾಗಿದೆ. ಪೈವಳಿಕೆ ಪಂಚಾಯತ್‌ನ 8ನೇ ವಾರ್ಡ್ ಪೆಲ್ತಡ್ಕ ಎಂಬಲ್ಲಿ ಗುಡ್ಡೆ ಜರಿದು ಬಿದ್ದಿದೆ. ಹಲವು ವರ್ಷಗಳ ಹಿಂದೆ ಸುಮಾರು ಐದು ಕಿಲೋ ಮೀಟರ್ ಉದ್ದಕ್ಕೆ ಸಡಕ್ ಯೋಜನೆಯಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ.

ಪೆಲ್ತಡ್ಕ ಎಂಬಲ್ಲಿ ಬೃಹತ್ ಗುಡ್ಡೆಯನ್ನು ಅಗೆದು ರಸ್ತೆಯನ್ನು ನಿರ್ಮಿಸಲಾಗಿದ್ದರೂ ವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಗುಡ್ಡೆ ಜರಿದು ಬೀಳಲು ಕಾರಣವೆಂದು ಊರವರು ತಿಳಿಸಿದ್ದಾರೆ.

ಇದೀಗ ಈ ಪ್ರದೇಶದಲ್ಲಿ ರಸ್ತೆಯ ಇಕ್ಕೆಡೆಯಲ್ಲಿ ಬೃಹತ್ ಎತ್ತರದಲ್ಲಿ ಗುಡ್ಡೆ ಹಲವು ವರ್ಷಗಳಿಂದ ಮಳೆಗೆ ಕುಸಿದು ಬೀಳಲಾರಂಭಿಸಿದೆ. ಜರಿದು ಬಿದ್ದ ಮಣ್ಣು ರಸ್ತೆಯಲ್ಲಿ ತುಂಬಿಕೊಂಡಿದ್ದು ಸ್ಥಳೀಯರು ಸ್ವಲ್ಪ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದರೂ ಇನ್ನೂ ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆ ಬದಿಯಲ್ಲಿಯೇ ಉಳಿದುಕೊಂಡಿದ್ದು ಮಾತ್ರವಲ್ಲ ಇನ್ನೂ ಗುಡ್ಡೆ ಕುಸಿದು ಬೀಳಲು ಸಿದ್ದಗೊಂಡಿದ್ದು, ಇದನ್ನು ದುರಸ್ಥಿಗೊಳೀಸಬೇಕಾದರೆ ಲಕ್ಷಾಂತರ ರೂ ಅಗತ್ಯ ಬೇಕಾಗಬಹುದೆಂದು ಊರವರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ನೂರಾರು ಮನೆಗಳಿವೆ. ಅಲ್ಲದೆ ಮುಳಿಗದ್ದೆಯಿಂದ ಸುದೆಂಬಳ, ಕನಿಯಾಲ ಮೊದಲಾದ ಕಡೆಗಳಿಗೆ ತೆರಳಲು ಹತ್ತಿರ ದಾರಿಯಾಗಿದೆ. ಅಲ್ಲದೆ ಹಲವು ಶಾಲೆಗಳ ವಾಹನಗಳ ಸಹಿತ ಇತರ ವಾಹನಗಳು ಸಂಚಾರವಿದೆ. ರಸ್ತೆಯ ದುರಸ್ಥಿ ಕಾರ್ಯ, ಚರಂಡಿ ನಿರ್ಮಾಣವನ್ನು ಮಾಡಬೇಕೆಂದು ಸಂಬಂಧಪಟ್ಟ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮನವಿಯನ್ನು ಸಲ್ಲಿದ್ದಾರೆ. ಈ ರಸ್ತೆಯ ಸಮಸ್ಯೆಗೆ ಕೂಡಲೇ ಪರಿಹಾರವನ್ನು ಮಾಡಬೇಕೆಂದು ಊರವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *