ಬೆಳ್ತಂಗಡಿ: ಇಲ್ಲಿನ ಗುರುದೇವ ಕಾಲೇಜು ಬಳಿಯ ನಿವಾಸಿ ತೋಪೆ ಗೌಡರವರ ಪುತ್ರ ಪುನೀತ್ ಎಸ್.ಟಿ. (21ವ) ಸೆ.4ರಿಂದ ಕಾಣೆಯಾಗಿದ್ದಾರೆ. 3ನೇ ವರ್ಷದ ಬಿ.ಎಸ್.ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಇವರು ತಂಗಿ ಕಾಲೇಜಿಗೆ ತೆರಳಿದ ಬಳಿಕ ಒಬ್ಬನೇ ಮನೆಯಲ್ಲಿದ್ದು ತಾಯಿ ಸಕಲೇಶಪುರದಿಂದ ಬಂದು ನೋಡುವಾಗ ಹಾಲ್‌ನ ಬೆಡ್ ಮೇಲೆ ಒಂದು ಪತ್ರ ಬರೆದಿಟ್ಟು ತೆರಳಿದ್ದಾರೆ.
ಪುನೀತ್ ರವರನ್ನು ನೆರೆಮನೆಯ ಗಿರಿಜಾ ಎಂಬವರು ಮಧ್ಯಾಹ್ನ ವೇಳೆ ನೋಡಿದ್ದರು ಎನ್ನಲಾಗಿದೆ. ಈತನ ಕುರಿತು ಸಂಬಂಧಿಕರ ಮನೆ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ತಾಯಿ ಗೀತಾ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.