
ಸಕಲೇಶಪುರ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಮಾನ್ಯ ಪೊಲೀಸ್ ಮಹಾನಿರ್ದೇಶಕರು,ಕರ್ನಾಟಕ ರಾಜ್ಯ ರವರಿಗೆ ದೂರು ನೀಡಿದ ಹಿಂದೂ ಮುಖಂಡ ರಘು ಸಕಲೇಶಪುರ.
ಪೊಲೀಸ್ ಆರಕ್ಷಕ ಉಪಾಧೀಕ್ಷಕರು ಸಕಲೇಶಪುರ ಉಪವಿಭಾಗ ಮೂಲಕ ಮನವಿ ರವಾನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಶಾಂತಿ ಕಾಪಾಡಲು ಹಾಗು ಕೋಮುಗಲಭೆ ತಡೆಯಲು ತಕ್ಷಣಕ್ಕೆ ವರ್ಗಾವಣೆ ಮಾಡಿದ ಮಂಗಳೂರು ಕಮೀಷನರ್ ಶ್ರೀ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖಡಕ್ ಅಧಿಕಾರಿಯಾಗಿದ್ದು ಸರಿಯಷ್ಟೆ ಆದರೆ ಸಾಮಾನ್ಯ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರಿ ಹೋಗೋದು ಮನೆಗೆ ಹೋಗಿ ಬೇಡರಿಸೋದು ಮಾಡುತ್ತ ಇರುವ ಪೊಲೀಸ್ ನಡೆ ಹಲವು ಅನುಮಾನ ಹುಟ್ಟುಹಾಕುತ್ತದೆ ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವ ರೀತಿ ಪೊಲೀಸ್ ವರ್ತನೆ ಇದ್ದು ಶಾಂತಿ ನೆಲೆಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಆದೇಶಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
•ದಕ್ಷಿಣ ಕನ್ನಡದ ಹಿಂದೂಗಳು ಮತ್ತು ಕರ್ನಾಟಕ ರಾಜ್ಯದ ಹಿಂದೂಗಳ ಆರಾಧ್ಯ ಹಾಗೂ ಮಾರ್ಗದರ್ಶಕರು ಆಗಿರುವ ಕಲ್ಲಡ್ಕ
ಡಾ! ಶ್ರೀ ಪ್ರಭಾಕರ್ ಭಟ್ ಅವರ ಮೇಲೆ ವಿನಾಕಾರಣ ಕೇಸ್ ದಾಖಲಿಸಿ ಸಮಾಜವನ್ನು ಪ್ರಚೋದಿಸುವ ರೀತಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಅರುಣ್ ಸರ್ ಅವರು ವರ್ತನೆ ಮಾಡಿರೋದು ಖಂಡನೀಯ..
•2023 ನೇ ಸಾಲಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ 2 ನೇ ಅತಿ ಹೆಚ್ಚು ಮತ ಪಡೆದ ವ್ಯಕ್ತಿಯಾಗಿ ಹೊರಹೊಮ್ಮಿದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರನ್ನು ಏಕಾಏಕಿ ಕಲ್ಬುರ್ಗಿಗೆ ಗಡಿಪಾರು ಮಾಡಲು ಸಂಚು ರೂಪಿಸಿರೋಸು ಪ್ರಜಾಪ್ರಭುತ್ವ ಮತ್ತು ಸಂವಿಂಧಾನಾ ವಿರೋಧಿಯಾಗಿದ್ದು ಜಾತಿ, ಮತ, ಪಂಥ, ಧರ್ಮ ಬಿಟ್ಟು ಅವರಿಗೆ ಅಷ್ಟು ಮತ ನೀಡಿರುವ ಪುತ್ತೂರಿನ ಜನತೆಗೆ ಅವಮಾನ ಮಾಡಿದ ಹಾಗೆ ಆಗುತ್ತದೆ,ತಕ್ಷಣ ಗಡಿಪಾರು ಹಿಂಪಡಿಯಲು ಆದೇಶಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
•ಭರತ್ ಬಜರಂಗದಳದ ಜಿಲ್ಲಾ ಸಂಯೋಜಕನಾಗಿ ಸಂಘಟನಾ ಕಾರ್ಯ ಮಾಡುತ್ತಿದ್ದು ಸಂಘಟನಾ ವಿಸ್ತಾರದಲ್ಲಿ ತೊಡಗಿರುವ ಇವರನ್ನು ವಿನಾಕಾರಣ ಗಡಿಪಾರು ಮಾಡಲು ಹೊರಟಿರೋದು ಖಂಡನೀಯ.
• ಕಡಬ ತಾಲ್ಲೂಕಿನ ಸುತ್ತಮುತ್ತ ಇರುವ ಸಂಘಟನೆ ಕಾರ್ಯಕರ್ತರು ಮತ್ತು ಪ್ರಮುಖರ ಮನೆಗೆ ರಾತ್ರಿ ಹೋಗಿ ಪೊಲೀಸ್ ಭಯ ಪಡಿಸೋದು ಮನೆಯವರ ಬಳಿ ಅವ್ಯಾಚ ಶಬ್ದಗಳಿಂದ ನಿಂದಿಸೋದು ಮತ್ತು ಮನೆಯವರನ್ನು ಸಹ ಬೈದು ತೇಜೋವದೆ ಮಾಡುತ್ತಿರೋದನ್ನ ಖಂಡಿಸಿ ಕಡಬ ಪೊಲೀಸ್ ಠಾಣೆಗೆ ಕೇಳಲು ಹೋದ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿರೋದು ಖಂಡನೀಯ ಮತ್ತು ಕಡಬ ಠಾಣೆಯಲ್ಲಿ ದಾಖಲಾಗಿರುವ ಕೇಸ್ ವಾಪಸ್ಸು ಪಡೆಯುವಂತೆ ಆದೇಶಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
•ಕಾರ್ಯಕರ್ತರು ಎಲ್ಲಿ ಇರುತ್ತಾರೆ ಎಂಬ GPS ಮಾಹಿತಿ ಹೊರಗೆ ಹಂಚಿ ದೊಡ್ಡ ರೀತಿಯಲ್ಲಿ ಮನೆಗೆ ನುಗ್ಗುವ ಪ್ರಯತ್ನ ಮುಸ್ಲಿಮರಿಂದ ಆಗಬಹುದು ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಳಾಸ ಹೊರಗೆ ಹೋಗದ ರೀತಿಯಲ್ಲಿ ತಡೆಯಬೇಕು ಎಂದು ಕೇಳಿಕೊಳ್ಳುತ್ತೇವೆ.
•ಶಾಂತಿ ಕಾಪಾಡಲು ಸಾಮರಸ್ಯದ ಭಾಗವಾಗಿ ಜಾತಿ ಮುಖಂಡರು, ಹಿಂದೂ ಸಂಘಟನೆ ಮುಖಂಡರ ಜೊತೆ ಸಭೆ ನಡೆಸಿ ಅವರಿಗೆ ತಿಳಿ ಹೇಳಬೇಕು ಮತ್ತು ಶಾಂತಿ ಕಾಪಾಡಲು ಕಾರ್ಯಕರ್ತರಿಗೆ ಸೂಚನೆ ನೀಡಬೇಕು ಎಂದು ತಿಳಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು .
•social media ದಲ್ಲಿ ಆಧಾರರಹಿತ ಯಾವದೇ ವಿಷಯವನ್ನು ಪೋಸ್ಟ್ ಮಾಡಬಾರದು ಎಂದು ಹೇಳುವ ಬದಲು ಗಡಿಪಾರು ಮಾಡಿರೋದು ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು ಈ ಬಗ್ಗೆ ಪರಿಶೀಲನೆ ಮಾಡಲು ಆದೇಶಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
ಆದ್ದರಿಂದ ದಯಮಾಡಿ ಮೇಲ್ಕಂಡ ಎಲ್ಲ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಿ ಜನಸಾಮಾನ್ಯರು ನೆಮ್ಮದಿಯಿಂದ ಸ್ವತಂತ್ರವಾಗಿ ಓಡಾಡಲು ಅವಕಾಶ ಮಾಡಲು ಸೂಕ್ತ ಕ್ರಮ ಜರಗಿಸುವಂತೆ ಆದೇಶಿಸಬೇಕು ಮನವಿ ಮೂಲಕ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ
ಹಿಂದೂ ಹಿತರಕ್ಷಣಾವೇದಿಕೆ ಸಕಲೇಶಪುರ ಸಂಚಾಲಕ ಶಿವೂ ಜಿಪ್ಪಿ ಮತ್ತು ದೀಲಿಪ ಕೆರೋಡಿ ಉಪಸ್ಥಿತಿ ಇದ್ದರು.