ಫೇಸ್ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ವಿರುದ್ಧ ದೂರು ದಾಖಲು

Share with

ಚಿತ್ರದುರ್ಗ: ನಗರದಲ್ಲಿ ಸೆ.13ರಂದು ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯಲ್ಲಿ 9 ಡಿಜೆಗಳು ಭಾಗವಹಿಸಲಿವೆ ಎಂಬುದಾಗಿ ಸುಳ್ಳು ಸುದ್ದಿಯನ್ನು ಫೇಸ್‌ಬುಕ್ ನಲ್ಲಿ ಹಬ್ಬಿಸಿದ್ದ ಆ ‌ರ್.ಮಂಜುನಾಥ್ ಎಂಬಾತನ ವಿರುದ್ಧ ಮೊಳಕಾಲ್ಕೂರು ಠಾಣೆಯ ಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈಗಾಗಲೇ ಜಿಲ್ಲಾಧಿಕಾರಿಗಳು ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸುವುದನ್ನು ನಿಷೇಧಿಸಿ ಆ ದೇಶ ಹೊರಡಿಸಿದ್ದಾರೆ. ಆದರೆ ಮೊಳಕಾಲ್ಕೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಆರ್. ಮಂಜುನಾಥ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ “ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ.

ಚಿತ್ರದುರ್ಗದ ಬೃಹತ್ ಶೋಭಾಯಾತ್ರೆ. ಸೆ.13 ಶನಿವಾರ ಪ್ರಪ್ರಥ ಮ ಬಾರಿಗೆ ಚಿತ್ರದುರ್ಗ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಘರ್ಜಿಸಲು ಮುಂಬೈ, ಬೆಳಗಾವಿ, ಹುಬ್ಬಳ್ಳಿ ಹಾಗೂ ಇನ್ನೂ ಹೆಸರಾಂತ 9 ಡಿಜೆಗಳು ಭಾಗವಹಿಸಲಿವೆ’ ಎಂಬುದಾಗಿ ಸ್ಟೇಟಸ್ ಹಾಕಿದ್ದ. ಈ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಜನ ಡಿಜೆ ಬಳಸುವಂತೆ ಪ್ರ ಚೋದನೆ ಮಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ.

ಈ ಹಿನ್ನೆಲೆಯಲ್ಲಿ ಮೊಳಕಾಲ್ಕೂರು ಠಾಣೆಯಲ್ಲಿ ಪ್ರಕರಣ ದಾಖ ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *