ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ನೂತನ ಸೇತುವೆ ಬಳಿ ಕಾಂಕ್ರೀಟ್ ರಸ್ತೆ ಹದಗೆಟ್ಟು ಶೋಚನೀಯವಸ್ಥೆಗೆ ತಲುಪಿ ಕಬ್ಬಿಣದ ಸಲಾಕೆ ಎದ್ದು ಸಂಚಾರಕ್ಕೆ ಭೀತಿ ಉಂಟಾಗಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಸರಗೋಡು ಅಭಿವೃದ್ದಿ ಪ್ಯಾಕೇಜ್‌ನಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದೇ ವೇಳೆ ಸೇತುವೆಗೆ ಪ್ರವೇಶಿಸುವಲ್ಲಿ ಮಾತ್ರ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ಆದರೆ ಇದೀಗ ಕಳೆದ ಹಲವು ತಿಂಗಳ ಹಿಂದೆ ಕಾಂಕ್ರೀಟ್ ಕಿತ್ತೋಗಿ ಕಬ್ಬಿಣದ ಸಲಾಕೆ ಎದ್ದು ಕಾಣುತ್ತಿರುವುದು ಸಂಚಾರಕ್ಕೆ ಅಪಾಯಕಾರಿಯಾಗಿದೆ. ಕಾಂಕ್ರೀಟ್ ಕಾಮಗಾರಿ ಕಳೆಪೆಯಾಗಿರುವುದಾಗಿ ಈ ಹಿಂದೆಯೇ ಊರವರು ಆರೋಪಿಸಿದ್ದರು. ಈ ಪ್ರದೇಶದಲ್ಲಿ ಶಾಲೆ, ಕ್ಷೇತ್ರ, ಮಸೀದಿಗಳಿಗೆ ಪ್ರವೇಶಿವ ರಸ್ತೆ ಇದಾಗಿದೆ. ಅಲ್ಲದೆ ಕುಬಣೂರು ಶಾಂತಿಗುರಿ ಸಹಿತ ಹಲವಾರು ಕಡೆಗಳಿಗೆ ದಿನಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಹದಗೆಟ್ಟರಸ್ತೆ ಜನರಲ್ಲಿ ಆತಂಕವನ್ನುoಟುಮಾಡಿದೆ. ಕಿತ್ತೋಗಿರುವ ಕಾಂಕ್ರೀಟ್ ರಸ್ತೆಯನ್ನು ಕೂಡಲೇ ದುರಸ್ಥಿಗೊಳಿಸದಿದ್ದಲ್ಲಿ ಇನ್ನಷ್ಟು ಶೋಚನೀಯವಸ್ಥೆ ತಲುಪಿ ಈ ರಸ್ತೆಯಲ್ಲಿ ಸಂಚಾರಮೊಟಕುಗೊಳ್ಳ ಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ಥಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದೆ.