ಹೊಸದಿಲ್ಲಿ: ಸಿಬಂದಿ ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಹೊಸ ನೀತಿ ಬಿಡುಗಡೆ ಮಾಡಿದೆ. ಈ ಮೊದಲು ಸೇನಾ ಸಿಬಂದಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಸಂಪೂ ರ್ಣವಾಗಿ ನಿಷೇಧಿಸಲಾಗಿತ್ತು. ಇದೀಗ ಕೊಂಚ ಸಡಿಲಗೊಳಿಸಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎಕ್ಸ್ ಸೇರಿ ಸಾಮಾಜಿಕ ಜಾಲತಾಣಗಳನ್ನು ನೋಡಲು ಅವಕಾಶ ನೀಡಲಾಗಿದೆ. ಆದರೆ, ಪೋಸ್ಟ್ ಮಾಡುವುದು, ಲೈಕ್ಸ್ ಒತ್ತು ವುದು ಮತ್ತು ಕಮೆಂಟ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ.

ವಿಷಯಗಳನ್ನು ತಿಳಿದುಕೊಳ್ಳಲು ಜಾಲತಾಣಗಳನ್ನು ಬಳಕೆ ಮಾಡಬ ಹುದು ಎಂದು ಸೇನೆ ಹೇಳಿದೆ. ಇದು ಈ ತಕ್ಷಣದಿಂದಲೇ ಜಾರಿಯಾಗಲಿದೆ.
ಮಾರ್ಗಸೂಚಿಗಳೇನು?: ಸಾಮಾಜಿಕ ಜಾಲತಾಣಗಳ ಮೂಲಕ ಬರುವ
ಅಪರಿಚಿತ ಕರೆಗಳನ್ನು ಸ್ವೀಕರಿಸುವಂತಿಲ್ಲ. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲು ವಿಪಿಎನ್, ಟೊರಂಟ್ ವೆಬ್‌ಸೈಟ್, ನಕಲಿ ಸಾಫ್ಟ್‌ವೇರ್ ಬಳಸು ವಂತಿಲ್ಲ. ಮಾಹಿತಿ, ಜ್ಞಾನದ ಉದ್ದೇಶ ಕ್ಕಾಗಿ ಕೆಲವೊಂದು ತಾಣಗಳನ್ನು ಬಳಸಬಹುದು. ಲಿಂಕ್ಸ್ ಇನ್ ಅನ್ನು ಕೇವಲ ರೆಸ್ಟೋಮ್ ಅಪ್‌ಲೋಡ್ ಮಾಡಲು ಬಳಸಬೇಕು. ನಿಯಮ ಮೀರಿದರೆ ಕಠಿನ ಕ್ರಮದ ಎಚ್ಚರಿಕೆ ನೀಡಲಾಗಿದೆ.




