
ಉಪ್ಪಳ: ಅಟ್ಟೆಗೋಳಿ ನಿವಾಸಿ ಕಾಂಗ್ರೇಸ್ ಮುಖಂಡ ಹಮೀದ್ ಕೋಡಿಯಡ್ಕ [75] ನಿಧನರಾದರು. ಭಾನುವಾರ ರಾತ್ರಿ 7ಗಂಟೆಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಉಪ್ಪಳದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನಹೊಂದಿದರು. ಇವರು ಚೆನೈ, ಶಿವಮೊಗ್ಗ, ಮೈಸೂರು ಕಡೆಗಳಲ್ಲಿ ಪೇಪರ್ ತಯಾರಿ ಘಟಕದಲ್ಲಿ ಇಂಜಿನಿಯರ್‌ರಾಗಿ ನಿವೃತ್ತಿಹೊಂದಿದ್ದರು. ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾಅಧ್ಯಕ್ಷರಾಗಿದ್ದರು. ಮೃತರು ಪತ್ನಿ ನೆಬೀಸ, ಮಕ್ಕಳಾದ ಆರೀಫ್ [ಗಲ್ಪ್], ನೆಜೀಮು, ಹರ್ಷಾದ್ [ಗಲ್ಪ್], ಸೊಸೆಯಂದಿರಾದ ವಿಶ್ವಧಿ, ನೌರಿನ್, ಅಳಿಯ ಯೂಸಫ್, ಸಹೋದರಿ ಬೀಬಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರರಾದ ಕೋಡಿಯಡ್ಕ ಅಬ್ದುಲ್ ಮಾಸ್ತರ್, ಅಬ್ದುಲ್ ರಹಿಮಾನ್, ಶೇಖಾಲಿ, ಸಹೋದರಿಯರಾದ ಮರಿಯಮ್ಮ, ಮೋಳು ಇವರು ಈ ಹಿಂದೆ ನಿಧನರಾಗಿದ್ದಾರೆ.





