ಕರೂರು ಕಾಲ್ತುಳಿತ ದುರಂತದ ಹಿಂದೆ ಪಿತೂರಿ ಶಂಕೆ.. ಕೋರ್ಟ್​ ಮೆಟ್ಟಿಲೇರಿದ ವಿಜಯ್!

Share with

ದಕ್ಷಿಣ ಭಾರತದಲ್ಲೇ ಕಂಡು ಕೇಳರಿಯದ ದುರಂತವೊಂದು ತಮಿಳುನಾಡಿನಲ್ಲಿ ನಡೆದು ಹೋಗಿದೆ. ತಮಿಳು ನಟ ದಳಪತಿ ವಿಜಯ್​ರ ರಾಜಕೀಯ ಱಲಿ. 40 ಅಮಾಯಕ ಜನರನ್ನು ಬಲಿ ಪಡೆದಿದೆ. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬಂದಿದ್ದವರು ಮಸಣ ಸೇರಿದ್ದು, ಕರೂರಲ್ಲಿ ನೀರವ ಮೌನ ಆವರಿಸಿದೆ. ಕರೂರು ಕಾಲ್ತುಳಿತ ಪ್ರಕರಣ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ರಾಜಕೀಯ ಕೆಸರೆರಚಾಟ ಮುಂದುವರಿದೆ. ಟಿವಿಕೆ ಮತ್ತು ಆಡಳಿತ ಪಕ್ಷದ ನಡುವೆ ರಾಜಕೀಯ ವಾಗ್ಯುದ್ಧ ಶುರುವಾಗಿದೆ.

ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಾನಾ ಅನುಮಾನಗಳಿವೆ.. ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಸರಿಯಾಗಿ ಇರಲಿಲ್ಲ. ಆಂಬುಲೆನ್ಸ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ. ಆದ್ರೆ ಈ ಆರೋಪಗಳನ್ನು ಎಡಿಜಿಪಿ ತಳ್ಳಿಹಾಕಿದ್ದಾರೆ. ಹಲವು ಅನುಮಾನಗಳು ಇರುವ ಕಾರಣ, ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಟಿವಿಕೆ ನಾಯಕರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಕೆ ಕೋರಿ ಟಿವಿಕೆ ಸಲ್ಲಿಸಿರುವ ಅರ್ಜಿ ಇಂದು ಮಧ್ಯಾಹ್ನ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಕರೂರು ಕಾಲ್ತುಳಿತ ದುರಂತ ಸಂಬಂಧ ಕೇವಲ ಟಿವಿಕೆ ಪ್ರಮುಖರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆದ್ರೆ, ಇಷ್ಟು ದೊಡ್ಡ ದುರಂತ ಸಂಭವಿಸಿದ್ರೂ ವಿಜಯ್​ ವಿರುದ್ಧ ಕ್ರಮಕ್ಕೆ ತಮಿಳುನಾಡು ಸರ್ಕಾರ ವಿಳಂಬ ಮಾಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.

ತಮಿಳುನಾಡಲ್ಲಿ ದೊಡ್ಡ ಮಟ್ಟದಲ್ಲಿ ದಳಪತಿ ವಿಜಯ್ ಅಲೆ ಇದೆ. ವಿಜಯ್ ರಾಜಕೀಯ ಪಕ್ಷದ ಱಲಿಗೆ ಜನಸಾಗರ ಸೇರುತ್ತಿದೆ. ಹೀಗಾಗಿ ಕಾಲ್ತುಳಿತ ಕೇಸ್‌ನಲ್ಲಿ ವಿಜಯ್ ಬಂಧಿಸಿದ್ರೆ ಸಿಂಪಥಿ ಸೃಷ್ಟಿ ಆಗುವ ಸಾಧ್ಯತೆ. ಇದು ನಟ ವಿಜಯ್ ಮೇಲೆ ಅನುಕಂಪಕ್ಕೂ ಕಾರಣವಾಗಬಹುದು. ಡಿಎಂಕೆ ಪಕ್ಷದ ವಿರುದ್ಧದ ಅಭಿಪ್ರಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಡಿಎಂಕೆ ಸರ್ಕಾರ ಚಿಂತನೆ ನಡೆಸಿದೆ.


Share with

Leave a Reply

Your email address will not be published. Required fields are marked *