ಮಂಜೇಶ್ವರ: ಕೊಡ್ಲಮೊಗರು ನೂಜಿ ನಿವಾಸಿ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಹಾಗೂ ಹಿರಿಯ ಕೃಷಿಕ ಎನ್.ರಾಮ ಮೂಲ್ಯ [76] ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.


ಇವರು ನೂಜಿ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಟ್ರಸ್ಟ್ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಲೀಲಾ, ಮಕ್ಕಳಾದ ರಾಜೇಶ್, ವಿಜಯ್, ಸೊಸೆಯಂದಿರಾದ ವಿಜಯಲಕ್ಷಿ, ಭವ್ಯಶ್ರೀ, ಹರ್ಷಿತ, ಸಹೋದರ ಗೋಪಾಲ, ಸಹೋದರಿಯರಾದ ಜಾನಕಿ, ಸರೋಜಿನಿ, ಜಯಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಓರ್ವ ಪುತ್ರ ಗಣೇಶ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಕೊಡ್ಲಮೊಗರು ನೂಜಿ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಟ್ರಸ್ಟ್ ಹಾಗೂ ಸೇವಾ ಸಮಿತಿ ಸಂತಾಪ ಸೂಚಿಸಿದೆ.




