ಉಪ್ಪಳ: ತಲಪಾಡಿಯಿಂದ ಚೆಂಗಳ ತನಕ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗುತ್ತಿದೆ. ಹೊಸಂಗಡಿಯಲ್ಲಿ ಹೆದ್ದಾರಿ ನಿರ್ಮಾಣಗೊಳ್ಳುತ್ತಿರುವ ಮಾದರಿಯಲ್ಲೇ ಬಂದ್ಯೋಡಿನಲ್ಲೂ ನಿರ್ಮಾಣಗೊಳ್ಳುತ್ತಿದೆ. ಭಾರೀ ಆಳದಿಂದ ಹೆದ್ದಾರಿ ರಸ್ತೆ ನಿರ್ಮಾಣ ಹಾಗೂ ಧರ್ಮತ್ತಡ್ಕ ರಸ್ತೆ ಪ್ರವೇಶಿಸಲು ಬೃಹತ್ ಸಂಕ ನಿರ್ಮಾಣವಗಿಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಹೊಂಡ ತೋಡುವ ಕೆಲಸಗಳು ಭರದಿಂದ ಸಾಗುತ್ತಿದೆ. ಇಲ್ಲಿಯೂ ಭಾರೀ ಗಾತ್ರದ ಕಗ್ಗಲ್ಲು ಪತ್ತೆಯಾಗಿದೆ. ಹೊಸಂಗಡಿ ಪೇಟೆಯಲ್ಲಿ ಭಾರೀ ಗಾತ್ರದ ಕಗ್ಗಲ್ಲು ಪತ್ತೆಯಾಗಿ ಸುಮಾರು ಮೂರು ತಿಂಗಳು ಕಲ ತೆರವುಗೊಳಿಸಬೇಕಾಗಿ ಬಂದಿತು. ಹೊಸಂಗಡಿ ಪೇಟೆ ಹಾಗೂ ಬಂದ್ಯೋಡು ಪೇಟೇಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತಿದೆ.
ಕಾಮಗಾರಿ ಶೀಘ್ರ ಪೂರ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಲಪಾಡಿಯಿಂದ ಚೆಂಗಳ ತನಕ ಒಟ್ಟು ಎಂಟು ಸೇತುವೆಗಳು, ಎರಡು ಪ್ಲೈ ಓವರ್ ನಿರ್ಮಾಣಗೊಳ್ಳುತ್ತಿದೆ. ಪೊಸೋಟು, ಕುಕ್ಕಾರ್, ಕುಂಬಳೆ ಸೇತುವೆ ಕಾಮಗಾರಿ ಪೂರ್ತಿಗೊಳಿಸಿ ವಾಹನ ಸಂಚಾರ ನಡೆಯುತ್ತಿದೆ. ಇಲ್ಲಿ ಹಳೆಯ ಸೇತುವೆಯನ್ನು ತೆರವುಗೊಳಿಸಲಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಸರ್ವೀಸ್ ರಸ್ತೆ ಪೂರ್ತಿಗೊಂಡು ಹೆದ್ದಾರಿ ನಿರ್ಮಾಣದ ಕೆಲಸಗಳು ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಅಂಡ್ ಪಸ್ ಕಾಮಗಾರಿ ಪೂರ್ತಿಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮಸ್ಯೆಗೀಡಾಗುತ್ತಿದ್ದಾರೆ.