ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್‌ನ 14ನೇ ವಾರ್ಡ್ನ ಕುಡಾಲು ಮೇರ್ಕಳ ಬಳಿಯ ಕೊಲ್ಲಬಂಜಾರ ಸಾರ್ವಜನಿಕ ಹಿಂದೂ ರುದ್ರ ಭೂಮಿಗೆ ಶವ ಸುಡಲು ಶೆಡ್ಡ್ ನಿರ್ಮಾಣದ ಕಾಮಗಾರಿ ಪೂರ್ತಿಗೊಂಡಿದ್ದು, ಶೀಘ್ರ ಉದ್ಘಾಟನೆಗೊಳಿಸಲು ಊರವರು ಒತ್ತಾಯಿಸಿದ್ದಾರೆ.
ರುದ್ರಭೂಮಿಗೆ ಆವರಣಗೋಡೆ ಮಾತ್ರವೆ ಈ ಹಿಂದೆ ನಿರ್ಮಿಸಲಾಗಿದೆ. ಇದರ ಅಭಿವೃದ್ದಿಗಾಗಿ ಊರವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ವಾರ್ಡ್ ಸದಸ್ಯೆ ರಾಜೀವಿ ಶೆಟ್ಟಿಗಾರ್ ರವರ ಮುತುವರ್ಜಿಯಿಂದ ಪಂಚಾಯತ್‌ನಿಂದ ಲಕ್ಷಾಂತರ ರೂ ವೆಚ್ಚದಿಂದ ಶೆಡ್ ರ್ಮಾಣಕ್ಕೆ ಮಂಜೂರುಗೊಂಡು ಡಿಸಂಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಿದ್ದರು. ನಿನ್ನೆಗೆ ಶೆಡ್ಡ್ ನಿರ್ಮಾಣ ಕೆಲಸ ಪೂರ್ತಿಗೊಂಡಿದೆ.
ಕುಡಾಲು ಮೇರ್ಕಳ, ಕಯ್ಯಾರ್ ಗ್ರಾಮ ಸಹಿತ ವಿವಿಧ ಪ್ರದೇಶಗಳಿಗೆ ಈ ಸ್ಮಶಾನದ ಪ್ರಯೋಜನೆಯನ್ನು ಪಡೆಯುತ್ತಿದ್ದಾರೆ. ಈ ಸ್ಮಶಾನ ಗುಡ್ಡೆ ಪ್ರದೇಶದಲ್ಲಿದ್ದು ವ್ಯವಸ್ಥಿತ ರಸ್ತೆ ಇಲ್ಲದಿರುವುದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ಕಾಂಕ್ರೀಟ್ ಅಥವಾ ಡಾಮಾರು ಮೂಲಕ ರಸ್ತೆ ನಿರ್ಮಾಣ ಹಾಗೂ ನೀರು, ವಿದ್ಯುತ್‌ನ ಸೌಕರ್ಯಗಳು ಅಗತ್ಯವಾಗಿದ್ದು, ಅಲ್ಲದೆ ಪೂರ್ತಿ ಆವರಣಗೋಡೆ ನಿರ್ಮಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಈ ಅಭಿವೃದ್ದಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನೆರವೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.