ಅನಂತಪುರದಲ್ಲಿ ವಂದೇ ಭಾರತ್‌ ರೈಲಿನ ಬಿಡಿ ಭಾಗಗಳ ನಿರ್ಮಾಣ

Share with

ಕಾಸರಗೋಡು: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಬಿಡಿ ಭಾಗಗಳನ್ನು ಕಾಸರಗೋಡಿನ ಅನಂತಪುರದಲ್ಲಿ ತಯಾರಿಸಲಾಗುವುದು. ರೈಲಿನ ಅಡಿಪಾಯ, ಶೌಚಾಲಯದ ಬಾಗಿಲು ಮತ್ತು ಬರ್ತ್‌ಗಳನ್ನು ಕುಂಬಳೆ ಸಮೀಪದ ಅನಂತಪುರದಲ್ಲಿರುವ ಕೈಗಾರಿಕಾ ಉದ್ಯಾನದಲ್ಲಿ ತಯಾರಿಸಲಾಗುವುದು.

ಪಂಜಾಬ್‌ನ ಖನ್ನವನ್ನು ಪ್ರಧಾನ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಖ್ಯಾತ ಉದ್ದಿಮೆ ಸಂಸ್ಥೆಯಾದ ಮ್ಯಾಗ್ನಾಸ್‌  ಫ್ಲೈವುಡ್‌ ಕಂಪೆನಿ ಇದಕ್ಕಾಗಿ ಅನಂತಪುರದಲ್ಲಿ ತನ್ನ ಹೊಸ ಘಟಕವನ್ನು ಸ್ಥಾಪಿಸಿ ಅಲ್ಲಿ ವಂದೇ ಭಾರತ್‌ಗೆ ಅಗತ್ಯದ ಬಿಡಿ ಭಾಗಗಳನ್ನು ನಿರ್ಮಿಸಲಿದ್ದು, ಈ ಘಟಕ ಆರಂಭಿಸುವ ಒಡಂಬಡಿಕೆಗೆ ಪ್ರಸ್ತುತ ಕೈಗಾರಿಕೆ ಕಂಪೆನಿ ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರ ಸಹಿ ಹಾಕಿದೆ. ಅನಂತಪುರದಲ್ಲಿ ತಯಾರಿಸುವ ಸಾಮಗ್ರಿಗಳನ್ನು ಬಳಿಕ ಚೆನ್ನೈಯ ರೈಲು ಬೋಗಿ ನಿರ್ಮಾಣ ಕಾರ್ಖಾನೆಗೆ ಸಾಗಿಸಲಾಗುವುದು ಎಂದು ಮ್ಯಾಗ್ನಾಸ್‌ ಪ್ಲೈವುಡ್ಸ್‌ ಸಂಸ್ಥೆಯ ಮಾಲಕ ಮಹೇಶ್‌ ಗುಪ್ತ ತಿಳಿಸಿದ್ದಾರೆ.

ನೂರಾರು ಮಂದಿಗೆ ಉದ್ಯೋಗ ನಿರೀಕ್ಷೆ
ಅನಂತಪುರ ಕೈಗಾರಿಕೆ ಪ್ರದೇಶದಲ್ಲಿ ರೈಲಿನ ಬಿಡಿ ಭಾಗ ನಿರ್ಮಿಸುವ ಕಾರ್ಖಾನೆ ನಿರ್ಮಾಣಕ್ಕೆ 100 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚ ನಿರೀಕ್ಷಿಸಲಾಗಿದ್ದು, ನೂರಾರು ಮಂದಿಗೆ ಉದ್ಯೋಗ ಲಭಿಸಲಿದೆ.


Share with

Leave a Reply

Your email address will not be published. Required fields are marked *