
ಸಕಲೇಶಪುರ : ನಗರದ ಕುಶಾಲನಗರ ಬಡಾವಣೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಕಟಾವು ಮಾಡಿಟ್ಟಿದ್ದ 120 ಕೆ.ಜಿ ಅಷ್ಟು ಗೋಮಾಂಸ ಪತ್ತೆಯಾಗಿದೆ.
ಕಸಾಯಿಖಾನೆಯಂತೆ ಮಾರ್ಪಾಡು ಮಾಡಿದ್ದ ಕೊಣೆಯೊಳಗೆ ಗೋವನ್ನು ವದೆ ಮಾಡಿ ನೇತು ಹಾಕಿದ್ದ ಪ್ರಕರಣ ,ಕುಶಾಲನಗರ ಬಡಾವಣೆಯ ಯಾಸೀನ್ ಎಂಬಾತನನ್ನು ನಗರ ಠಾಣೆಯ ಪೋಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಜಾದ್ ರಸ್ತೆಯಲ್ಲಿ ದ್ವಿಚಕ್ರ ಸ್ಕೂಟರ್ ಬೈಕ್ ನಲ್ಲಿ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದಾಗ ನಗರ ಠಾಣೆಯ ಪೋಲಿಸರು ದಾಳಿ ನಡೆಸಿದ್ದು ಒಂದು ದ್ವಿಚಕ್ರ ವಾಹನ ಸಹಿತ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅತಿಕ್ ಖುರೇಷಿ ಎಂಬಾತನನ್ನು ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಒಟ್ಟಾರೆಯಾಗಿ ಒಂದೇ ದಿನ ಸಕಲೇಶಪುರ ನಗರ ಠಾಣೆಯಲ್ಲಿ ಗೋಹತ್ಯಾ ಪ್ರತಿಬಂಧಕ ಕಾಯ್ದೆಯಡಿ ಎರಡು ಪ್ರಕರಣಗಳು ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಗರ ಠಾಣೆಯಲ್ಲಿ ಪೋಲಿಸರು ಸೇರಿದಂತೆ ಪಶು ವೈದ್ಯಕೀಯ ಅಧಿಕಾರಿಗಳು. ಪುರಸಭೆ ಅಧಿಕಾರಿಗಳು ಭಾಗವಹಿಸಿದ್ದರು…