ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಕಾಸರಗೋಡಿನ ಕನ್ನಡಿಗರ ಕೊಡುಗೆ ಅಪಾರ : ನಾಡೋಜ ಡಾl ಮಹೇಶ್ ಜೋಶಿ

Share with


ಮೀಯಪದವು, ಆ 10 : ಕಾಸರಗೋಡಿನ ಕನ್ನಡಿಗರು ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ ಗೆ ನೀಡಿದ ಕೊಡುಗೆ ಅಪಾರ. ಕನ್ನಡಿಗ ಸಾಧಕರ ತವರೂರಾದ ಕಾಸರಗೋಡು ಅನೇಕ ಮಂದಿಯ ಕರ್ಮಭೂಮಿ. ಕೇರಳದಲ್ಲಿದ್ದರೂ ಕಾಸರಗೋಡಿನ ಕನ್ನಡಿಗರೊಂದಿಗೆ ನಿರಂತರವಾಗಿ ಭಾವನಾತ್ಮಕ ಸಂಬಂಧ ವನ್ನು ಹೊಂದಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾl ಮಹೇಶ್ ಜೋಶಿ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿಷ್ಟಾನ ಬೆಂಗಳೂರು, ವಿಕಾಸ ಮೀಯಪದವು ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಡಾ. ನಾ ಮೊಗಸಾಲೆ ಪೌರಾಭಿನಂದನೆ ಹಾಗೂ ಸಾಹಿತ್ಯ ಸಮೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅವರು ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕಸಾಪ ದ. ಕ. ಜಿಲ್ಲಾಧ್ಯಕ್ಷ ಡಾl ಯಂ. ಪಿ. ಶ್ರೀನಾಥ್, ಕಸಾಪ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂoತಾರು, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಮುರಳೀಧರ ಬಳ್ಳುಕ್ಕರಾಯ, ಕಸಾಪ ಮಂಗಳೂರು ತಾಲೂಕು ಅಧ್ಯಕ್ಷ ಡಾl ಮಂಜುನಾಥ ರೇವಣಕರ್, ಕಸಾಪ ಪುತ್ತೂರು ತಾಲ್ಲೂಕು ಅಧ್ಯಕ್ಷ ಉಮೇಶ್ ನಾಯಕ್, ಶಂಪಾ ಪ್ರತಿಷ್ಟಾನ ಸಂಸ್ಥಾಪಕಿ ಡಾl ಪ್ರಮೀಳಾ ಮಾಧವ್, ಮೀಯಪದವು ವಿ. ಯು. ಪಿ. ಶಾಲಾ ಮುಖ್ಯಉಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಮತ್ತು ಡಾ ಕೈಯಾರರ ಭಾವಚಿತ್ರ ಅನಾವರಣಗೊಳಿಸಲಾಯಿತು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ ಜಯಪ್ರಕಾಶ್ ನಾರಾಯಣ ಪ್ರಾಸ್ತಾವಿಸಿ ಸ್ವಾಗತಿಸಿ, ನಿವೃತ್ತ ಮುಖ್ಯ ಉಪಾಧ್ಯಾಯ ರಾಜಾರಾಮರಾವ್ ಮತ್ತು ಡಾ ಶಾರದಾ ಬೆಂಗಳೂರು ನಿರೂಪಿಸಿದರು. ಶೇಖರ ಶೆಟ್ಟಿ ಬಾಯಾರು ವಂದಿಸಿದರು.
ಬಳಿಕ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮೊಗಸಾಲೆಯವರ ಸಾಹಿತ್ಯ ಸಮೀಕ್ಷೆ ಗೋಷ್ಠಿ, ಮೊಗಸಾಲೆ ಕಾವ್ಯ ಗಾಯನ, ಡಾl ಯು. ಮಹೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಾ ಮೆಚ್ಚಿದ ಮೊಗಸಾಲೆಯವರ ಕಾದಂಬರಿ ಗೋಷ್ಠಿ, ಡಾl ನಾ ಮೊಗಸಾಲೆಯವರೊಂದಿಗೆ ಲೋಕಾಭಿರಾಮ ನಡೆಯಿತು.


Share with