ವೀಕ್ಷಕವಾಣಿ: ವಿವಾದಿತ ತಾರೆ ರೂಪದರ್ಶಿಯಾಗಿದ್ದ ಪೂನಂ ಪಾಂಡೆ ಫೆ.2ರಂದು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಖಚಿತಪಡಿಸಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
“ಇಂದು ಬೆಳಗಿನ ಸಮಯ ನಮಗೆ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಮ್ಮ ಪ್ರೀತಿಯ ಪೂನಮ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಈ ಬಗ್ಗೆ ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಶುದ್ಧ ಪ್ರೀತಿಯಿಂದ ಭೇಟಿ ಆದದ್ದಾಗಿದೆ. ಈ ದುಃಖದ ಸಮಯದಲ್ಲಿ ಅವರೊಂದಿಗಿನ ಪ್ರೀತಿಯನ್ನು ನಾವು ನೆನಪಿಸಿಕೊಳ್ಳುತ್ತೇವೆ” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಪೂನಂ ಪಾಂಡೆ ಭಾರತೀಯ ರೂಪದರ್ಶಿ ಮತ್ತು ಕಾಮಪ್ರಚೋದಕ ನಟಿ. ಅವರು 2013 ರಲ್ಲಿ ನಶಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು.