ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್ಪಿಜಿ ಸಮಸ್ಯೆಗೆ ಎಚ್ಸಿಎಲ್ನಿಂದ ವರ್ಕ್ ಫ್ರಂ ಹೋಮ್

Share with

ನವದೆಹಲಿ, ಮಾರ್ಚ್ 12: ಅಡುಗೆ ಅನಿಲದ ಕೊರತೆ ಭಾರತಾದ್ಯಂತ ಕಾಡುತ್ತಿದೆ. ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು (LPG cylinder) ದುಬಾರಿಯಾಗಿರುವುದು ಮಾತ್ರವಲ್ಲ, ಅವು ಸಿಗುವುದೇ ದುಸ್ತರವಾಗಿದೆ. ಬೆಂಗಳೂರಿನ ಅನೇಕ ಹೋಟೆಲ್ಗಳು ಈ ಬಿಕ್ಕಟ್ಟು ಬಗೆಹರಿಯುವವರೆಗೂ ಬಾಗಿಲು ಬಂದ್ ಮಾಡಲು ನಿರ್ಧರಿಸಿವೆ. ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಈ ಬಿಸಿ ತಾಕಿಸಿಕೊಂಡಿವೆ. ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುವುದು ಕಷ್ಟವಾಗಿದೆ. ಹೀಗಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಯೋಜಿಸಿವೆ. ವರದಿಗಳ ಪ್ರಕಾರ ಎಚ್ಸಿಎಲ್ಟೆಕ್ (HCLTech) ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿವೆ.

ಇಂದು ಮತ್ತು ನಾಳೆ, ಮಾರ್ಚ್ 12 ಮತ್ತು 13ರಂದು ಎಚ್ಸಿಎಲ್ಟೆಕ್ನ ಚೆನ್ನೈ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಮಿಂಟ್ ಪತ್ರಿಕೆಯ ವರದಿ ಮಾಡಿದೆ.

ಎಚ್ಸಿಎಲ್ಟೆಕ್ನಂತಹ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟರೆ, ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೇಫ್ಟಿ ಪ್ರೋಟೋಕಾಲ್ಗಳನ್ನು ಅಳವಡಿಸಿವೆ. ಇಂಟರ್ನಲ್ ವಾರ್ ರೂಮ್ಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಲೈವ್ ಆಗಿ ನಿಭಾಯಿಸುವ ಪ್ರಯತ್ನ ಮಾಡುತ್ತಿವೆ.

ಇನ್ಫೋಸಿಸ್ ಸಂಸ್ಥೆ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಲ್ಪಿಜಿ ಕೊರತೆಯಿಂದ ಕೆಫೆಟೇರಿಯಾದಲ್ಲಿ ಆಹಾರದ ಕೊರತೆ ಇರುವ ವಿಚಾರವನ್ನು ಮನದಟ್ಟು ಮಾಡಿದೆ. ಲೈವ್ ಫೂಡ್ ಕೌಂಟರ್ಗಳನ್ನು ನಿಲ್ಲಿಸಲಾಗಿದೆ. ಮನೆಯಿಂದಲೇ ಅಡುಗೆ ಮಾಡಿಕೊಂಡು ಪಾರ್ಸಲ್ ತರಬೇಕೆಂದು ಕಂಪನಿ ತಿಳಿಸಿದೆ. ಚೆನ್ನೈನಲ್ಲಿರುವ ಇನ್ಫೋಸಿಸ್ ಕಚೇರಿಯ ಉದ್ಯೋಗಿಗಳಿಗೂ ಇದೇ ಸಲಹೆ ನೀಡಲಾಗಿರುವುದು ತಿಳಿದುಬಂದಿದೆ.

ಅಡುಗೆ ಅನಿಲದ ಪೂರೈಕೆಯಲ್ಲಿ ಸದ್ಯ ಯಾವ ಸಮಸ್ಯೆಯೂ ಇಲ್ಲ ಎಂದು ಸರ್ಕಾರ ಹೇಳಿದರೂ ದೇಶದ ಹೆಚ್ಚಿನ ಕಡೆ ಎಲ್ಪಿಜಿ ಸಿಲಿಂಡರ್ ಸರಬರಾಜಿಗೆ ಧಕ್ಕೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಮತ್ತು ಗೃಹಬಳಕೆ ಎಲ್ಪಿಜಿ ಎರಡೂ ಕೂಡ ಅಡುಗೆ ಅನಿಲಗಳೇ ಆಗಿವೆ. ಗೃಹಬಳಕೆ ಗ್ಯಾಸ್ ಕೂಡ ಸಿಗುವುದು ದುಸ್ತರವೆನಿಸಿದೆ.


Share with

Leave a Reply

Your email address will not be published. Required fields are marked *