ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಶಿಶುವಿಗೆ ಎದೆಹಾಲು ಕುಡಿಸಿ ತಾಯ್ತನ ಮೆರೆದ ಪೊಲೀಸ್!

Share with

ಪುರಿ, ನವೆಂಬರ್ 10: ಒಡಿಶಾದ (Odisha) ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ ಬರೆಯುವಾಗ ಆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಇದರಿಂದ ಒಳಗಿದ್ದ ಅಮ್ಮನಿಗೆ ಸಂಕಟವಾಗಿ ಪರೀಕ್ಷೆಯತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆ ತಾಯಿಗೆ ಸಹಾಯ ಮಾಡಲು ಮುಂದಾದ ಒಡಿಶಾ ಮಹಿಳಾ ಕಾನ್‌ಸ್ಟೆಬಲ್ ತಾನೇ ಆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು, ಎದೆಹಾಲು (Breast Feeding) ಕುಡಿಸಿ, ನಿದ್ರೆ ಮಾಡಿಸುವ ಮೂಲಕ ತಾಯ್ತನ ಮತ್ತು ಮಾನವೀಯತೆ ಮೆರೆದಿದ್ದಾರೆ.

ಹಾಲು ಕುಡಿದ ಆ ಮಗು ಅಳುವುದು ನಿಲ್ಲಿಸಿ ಆ ಪೊಲೀಸ್ ಮಡಿಲಲ್ಲೇ ನಿದ್ರೆ ಮಾಡಿದೆ. ನೇಮಕಾತಿ ಪರೀಕ್ಷೆಯ ವೇಳೆ ಭದ್ರತೆಗೆ ಬಂದಿದ್ದ ಪೊಲೀಸ್ ಕಾನ್ಸ್ಟೆಬಲ್ ಆ ಮಗುವಿಗೆ ಹಾಲುಣಿಸಿ, ತಾಯ್ತನ ತೋರಿದ ಘಟನೆಯ ಬಗ್ಗೆ ಒಡಿಶಾ ಪೊಲೀಸ್ ಇಲಾಖೆ ಎಕ್ಸ್ನಲ್ಲಿ ಮಾಹಿತಿ ನೀಡಿದೆ. ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ ಗಂಟೆಗಟ್ಟಲೆ ಅಳುತ್ತಿದ್ದ ಮಗುವಿಗೆ ಹಾಲುಣಿಸಿ ಸಾಂತ್ವನ ಹೇಳಿದ್ದಾರೆ. ಇದರಿಂದ ತಾಯಿ ನೆಮ್ಮದಿಯಿಂದ ಪರೀಕ್ಷೆ ಬರೆದು ಹೊರಬಂದಿದ್ದಾರೆ.


Share with

Leave a Reply

Your email address will not be published. Required fields are marked *