ಕೇರಳದಲ್ಲಿ ಕೊರೊನಾ ರೂಪಾಂತರಿ ಜೆಎನ್​.1 ಪತ್ತೆ

Share with

ಹೊಸದಿಲ್ಲಿ: ಕೋವಿಡ್‌ ಸೋಂಕಿನ ಅತ್ಯಂತ ವೇಗವಾಗಿ ಹರಡಬಲ್ಲಂಥ ಉಪ ತಳಿ ಜೆಎನ್‌.1 ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದೆ.

ಕೊರೊನಾ ರೂಪಾಂತರಿ ಜೆಎನ್​.1

ಕೇರಳದಲ್ಲಿ ಡಿ.8ರಂದು ಜೆಎನ್.1 ತಳಿಯು ಪತ್ತೆಯಾಗಿದ್ದು, 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ದೃಢಪಟ್ಟಿದೆ. ವೃದ್ಧೆಯಲ್ಲಿ ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದಿತ್ತು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಿಂಗಾಪುರದಲ್ಲಿ ಅ.25ರಂದು ಭಾರತೀಯ ಪ್ರವಾಸಿಗನಲ್ಲಿ ಜೆಎನ್‌.1 ಪತ್ತೆಯಾಗಿತ್ತು. ತಮಿಳುನಾಡಿನ ಈ ವ್ಯಕ್ತಿ ಸಿಂಗಾಪುರಕ್ಕೆ ಪ್ರವಾಸ ಹೋಗಿದ್ದರು. ಈ ತಳಿ ವೇಗವಾಗಿ ವ್ಯಾಪಿಸುತ್ತದೆಯಾದರೂ ಸೋಂಕಿನ ತೀವ್ರತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಹೇಳಿದೆ.


Share with

Leave a Reply

Your email address will not be published. Required fields are marked *