ಧರ್ಮಸ್ಥಳ : 11 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಹಾಗೂ ಕೊಲೆಯಾದ ಸೌಜನ್ಯ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಆಗಸ್ಟ್ 20 ರಂದು ಸಂಜೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರಾದ ನಾಗಮ್ಮ ಗೌಡ ಭೇಟಿ ನೀಡಿದರು.
ಭೇಟಿ ನೀಡಿದ ಮೊದಲು ಕೊಲೆಯಾಗಿ ಪತ್ತೆಯಾದ ನೇತ್ರಾವತಿ ಮಣ್ಮ ಸಂಖ ಪ್ರದೇಶ ಪರಿಶೀಲನೆ ನಡೆಸಿ ಮತ್ತು ಸೌಜನ್ಯಳ ತಾಯಿ ಮತ್ತು ಮಾವನಿಂದ ಹಾಗೂ ಧರ್ಮಸ್ಥಳ ಪೊಲೀಸರಿಂದ ಮಾಹಿತಿ ಪಡೆದುಕೊಂಡರು, ನಂತರ ಸೌಜನ್ಯಳ ಪಾಂಗಾಳ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ನೀಡಿ ಬಳಿಕ ಘಟನೆಗಳ ಬಗ್ಗೆ ಮಾತುಕತೆ ನಡೆಸಿದರು.