ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ನ ಧ್ವಜ ಹಾರಿಸಿದ ಸಿಪಿಐ

Share with

ಕೊಚ್ಚಿ: ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಇಲ್ಲಿನ ಏಲೂ‌ರ್ ಗ್ರಾಮದ ಸಿಪಿಐ (ಎಂ) ಬ್ರಾಂಚ್ ಸಮಿತಿ ರಾಷ್ಟ್ರ ಧ್ವಜಕ್ಕೆ ಬದಲಾಗಿ ಕಾಂಗ್ರೆಸ್‌ನ ಧ್ವಜ ಹಾರಿಸಿದ ವಿಚಿತ್ರ ಘಟನೆ ನಡೆದಿದೆ.

ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದ ಬದಲಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನಡೆಸಿದ ಬಳಿಕವೇ ಪ್ರಮಾದ ಗೊತ್ತಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

10 ನಿಮಿಷ ಕಾಂಗ್ರೆಸ್ ಧ್ವಜ ಹಾರಿದೆ. ಗೊತ್ತಾದ ಕೂಡಲೇ ಅದನ್ನು ಇಳಿಸಲಾಗಿದೆ. ಅದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರ, ವಿಡಿಯೊ ಹರಿದಾಡಿದೆ.


Share with

Leave a Reply

Your email address will not be published. Required fields are marked *