ಉಪ್ಪಳ: ಮಂಗಲ್ಪಾಡಿ ಬೇರಿಕೆ ನಿವಾಸಿ ಸಿಪಿಎಂ ನೇತಾರ [ದಿ] ನಾರಾಯಣ ರವರ ಪುತ್ರ ಸಿಪಿಎಂ ಕಾರ್ಯಕರ್ತ ಶೇಷಾದ್ರಿ [೪೭] ಅಸೌಖ್ಯದಿಂದ ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು. ಲಿವರ್ ಸಂಬAಧಿಸಿ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಅವಿವಾಹಿತರಾಗಿದ್ದರು. ತಾಯಿ ಕಮಲ, ಸಹೋದರಿಯರಾದ ಶೈಲಜ, ಸೋನಿಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರಿ ಸುಮಿತ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಶಾಸಕ ಸಿ.ಎಚ್ ಕುಂಞAಬು, ಮಾಜಿ ಶಾಸಕ ಸತೀಶ್ಚಂದ್ರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.