ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ರಾಜ್ಯದ 23 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ವರ್ಷ ಭಾರಿ ಬೆಳೆ ಪರಿಹಾರ ಲಭಿಸಿದ್ದು, ಒಟ್ಟು ₹1,449 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಮೊತ್ತವು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ.

ತೊಗರಿ, ರಾಗಿ, ಭತ್ತ, ಮೆಕ್ಕೆಜೋಳ, ಹತ್ತಿ ಮತ್ತು ಸೋಯಾಬೀನ್ ಸೇರಿದಂತೆ ಹಲವಾರು ಬೆಳೆಗಳು ಅಕಾಲಿಕ ಮಳೆ ಹಾಗೂ ಬರದಿಂದ ಹಾನಿಗೊಳಗಾಗಿದ್ದವು. ಇದನ್ನು ಮನಗಂಡು ಈ ಪರಿಹಾರ ಹಣವನ್ನು ನೀಡಲಾಗಿದೆ.




