ಸಂಸ್ಕೃತಿ ಶಾಲೆ ಪ್ರಾರಂಭ.

Share with


ಸಕಲೇಶಪುರ : ಸಂಸ್ಕೃತಿ ಇಂಟರ್ ನ್ಯಾಷನಲ್  ಶಾಲೆ ಪ್ರಾರಂಭವಾಗಿದ್ದು, ಮಕ್ಕಳು ಪೋಷಕರು ಹಾಗು ಶಿಕ್ಷಕರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಶಿಕ್ಷಕಿಯರು ಮಕ್ಕಳೆಲ್ಲರನ್ನು ಆರತಿ ಮಾಡಿ, ಅಕ್ಷತೆ ಹಾಕಿ, ಹರಸಿ ಶಾಲೆಗೆ ಸ್ವಾಗತಿಸಿದರು. ನೂತನ ವರ್ಷದ ವಿದ್ಯಾರಂಭಕ್ಕೆ  ಪೋಷಕರೊಂದಿಗೆ ಮಕ್ಕಳ ಫೋಟೋಶೂಟ್ ವಿಭಿನ್ನವಾಗಿ ಮಾಡಿಸಲಾಯಿತು.  ಶಾಲೆಯ ಮುಂಭಾಗದಲ್ಲಿ ಹಾಕಿದ ತೋರಣ ಎಲ್ಲರ ಮನಸ್ಸನ್ನು ಸೆಳೆಯಿತು.  ಮಕ್ಕಳೆಲ್ಲರೂ ಗಣಪತಿ, ಸರಸ್ವತಿಯ ಶ್ಲೋಕಗಳನ್ನು ಹೇಳಿ ಗುರುಗಳಿಗೆ ವಂದಿಸಿ ಬಲಗಾಲಿಟ್ಟು ಶಾಲೆ ಪ್ರವೇಶಿಸಿ, 2025-26ರ ಶೈಕ್ಷಣಿಕ ವರ್ಷದ ವಿದ್ಯಾರಂಭವನ್ನು ಅತ್ಯಂತ ಉತ್ಸಾಹದಿಂದ ಸಂಭ್ರಮಿಸಿದರು.

ಈಗಾಗಲೇ ನರ್ಸರಿ, ಎಲ್ ಕೆಜಿ, ಯುಕೆಜಿ ತರಗತಿಗಳು ಪ್ರಾರಂಭವಾಗಿದ್ದು ತಮ್ಮ ಮಕ್ಕಳನ್ನು  ಸೇರಿಸಲು ಇಚ್ಚಿಸುವ ಪೋಷಕರು ಈ ಕೂಡಲೇ ಸಂಪರ್ಕಿಸಿ.
9964997494, 9480303736


Share with

Tags:

Leave a Reply

Your email address will not be published. Required fields are marked *