ಹನುಮಾನ್‌ನಗರದಲ್ಲಿ ಕಾಂಕ್ರೀಟ್ ರಸ್ತೆ ಸಮುದ್ರ ಪಾಲು: ಮೊಟಕುಗೊಂಡ ಸಂಚಾರ ಹಲವಾರು ಮನೆಗಳು ಅಪಾಯದಂಚಿನಲ್ಲಿ

Share with

ಉಪ್ಪಳ: ಕಳೆದ ಹಲವು ದಿನಗಳಿಂದ ವ್ಯಾಪಕಗೊಂಡ ಭಾರೀ ಕಡಲ್ಕೊರೆತದಿಂದ ಮೂಸೋಡಿ, ಮಣಿಮುಂಡ, ಶಿವಾಜಿನಗರ, ಐಲ ಬಂಗ್ಲ ಮೊದಲಾದ  ಕರಾವಳಿ ಪ್ರದೇಶದಲ್ಲಿ ಆತಂಕದ ಸ್ಥಿತಿ ಉಂಟಾಗುತ್ತಿದoತೆ ಉಪ್ಪಳ ಬಳಿಯ ಹನುಮಾನ್‌ನಗರದಲ್ಲಿ ಕಳೆದ ವರ್ಷ ಭಾರೀ ಮೊತ್ತದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಕಡಲ್ಕೊರೆತದಿಂದ ಸಮುದ್ರಪಾಲಾಗಿದ್ದು, ಹಲವಾರು ಮನೆಗಳು ಅಪಾಯದಂಚಿನಲ್ಲಿದೆ. ರಸ್ತೆ ಮುರಿದು ಇಬ್ಭಾಗಗೊಂಡಿದ್ದು, ಈ  ಪ್ರದೇಶದ ಮೀನುಗಾರರ ಸಂಚಾರ ಮೊಟಕುಗೊಂಡಿದೆ. ಸ್ಥಳೀಯ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.  ಹಲವಾರು ದಿನಗಳಿಂದ ಇಲ್ಲಿನ ತಡೆಗೋಡೆ ಕೊಚ್ಚಿಹೋಗಲು ಪ್ರಾರಂಭಗೊoಡಿದ್ದು, ನಿನ್ನೆಯಿಂದ ರಸ್ತೆ ಕೂಡಾ ಕೊಚ್ಚಿಹೋಗಿದೆ. ಈ ಪ್ರದೇಶದಲ್ಲಿ ಸುಮಾರು ೫೦೦ರಷ್ಟು ಮೀನುಗಾರ ಕೂಟುಂಬ ವಾಸವಾಗಿದ್ದು, ಇನ್ನು ಈ ಪ್ರದೇಶದ ಜನರಿಗೆ ವಾಹನದ ಮೂಲಕ ಉಪ್ಪಳ ಮೀನು ಮಾರುಕಟ್ಟೆಗೆ ತಮ್ಮ ಮೀನನ್ನು ಸಾಗಿಸಲು ಅಲ್ಲದೆ ವಿವಿಧ ಕೆಲಸ ಕಾರ್ಯಗಳಿಗೆ, ಅಸೌಖ್ಯ ಬಾದಿತರನ್ನು ಕೊಂಡುಹೋಗಲು ಸಾದ್ಯವಾಗದಂತ ಸ್ಥಿತಿ ಉಂಟಾಗಿದೆ.  ಮಣಿಮುಂದ ಸಹಿತ ಪರಿಸರ ಪ್ರಡೇಶಕ್ಕೆ ಪಿಶರೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ನಿರ್ಮಿಸಿ ವ್ಯವಸ್ಥಿತ ರೀತಿಯಲ್ಲಿ ತಡೆಗೋಡೆಯನ್ನು ನಿರ್ಮಿಸದ ಕಾರಣ ರಸ್ತೆ ಸಮುದ್ರಪಾಲಾಗಿರುವುದಾಗಿ, ಇದು ಅಧಿಕಾರಿಗಳ ನಿರ್ಲಕ್ಷ್ಯವೆಂದು ಸ್ಥಳೀಯರು ಆರೋಪಿಸಿದ್ದಾರೆ


Share with

Leave a Reply

Your email address will not be published. Required fields are marked *