ಉಪ್ಪಳ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಡಿ.9 ಮತ್ತು ಡಿ.10ರಂದು ನಡೆಯಲಿದೆ. 11ನೇ ವರ್ಷದ ಏಕಾಹ ಭಜನೆ ಡಿ.9ರಂದು ಮುಂಜಾನೆ ಗೋಪಾಲಕೃಷ್ಣ ಪೂಜಾರಿ ಚಿಗುರುಪಾದೆರವರು ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡಿದರು.


ವಸಂತ ಭಟ್ ತೊಟ್ಟೆತ್ತೋಡಿ ಭಜನೆಯನ್ನು ನಿರ್ವಹಣೆ ಮಾಡುವರು. ಡಿ.10ರಂದು ಬೆಳಿಗ್ಗೆ 6.40ಕ್ಕೆ ಭಜನಾ ಮಂಗಲೋತ್ಸವ, 8ಕ್ಕೆ ಗಣಹೋಮ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು.
ಸಂತಡ್ಕ ಶ್ರಿ ಅರಸು ಸಂಕಲನ ದೈವ ಕ್ಷೇತ್ರದ ಅಧ್ಯಕ್ಷ ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸುವರು. ಶಿರಿಯ ಶ್ರೀ ಶಂಕರನಾರಾಯಣ ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳ್ಯೂರು, ಮಂದಿರದ ಗುರುಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ಉಪಸ್ಥಿತರಿರುವರು.
ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಅಪರಾಹ್ನ 3ರಿಂದ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಯೂರು ಮಕ್ಕಳಿಂದ ಯಕ್ಷಗಾನ ಬಯಲಾಟ, ರಾತ್ರಿ 7ಕ್ಕೆ ಯಕ್ಷದ್ರುವ ಪಟ್ಲ ಪೌಂಡೇಶನ್ ಉಪ್ಪಳ ಘಟಕದ ವಾರ್ಷಿಕೋತ್ಸವದ ನಿಮಿತ್ತ ಯಕ್ಷಗಾನ ಬಯಲಾಟ ನಡೆಯಲಿದೆ.




