ಮಂಗಳೂರು: ದ.ಕ. ಜಿಲ್ಲೆಯ ಹಲವೆಡೆ ತಂಪೆರೆದ ಮಳೆರಾಯ

Share with

ಮಂಗಳೂರು: ರಣಬಿಸಿಲ ಬೇಗೆಗೆ ಬೆವರಿ ಬಳಲುತ್ತಿರುವ ಮಂಗಳೂರು ನಗರದ ಕೆಲವು ಪ್ರದೇಶ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಮಾ.22ರಂದು ಬೆಳ್ಳಂಬೆಳಿಗ್ಗೆ ಮಳೆರಾಯ ತಂಪೆರೆದಿದ್ದಾನೆ.

ದ.ಕ. ಜಿಲ್ಲೆಯ ಹಲವೆಡೆ ತಂಪೆರೆದ ಮಳೆರಾಯ

ಹವಾಮಾನ ಇಲಾಖೆ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಮಂಗಳೂರು ನಗರ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿ, ಬದಿಯಡ್ಕ ಪಾಣಾಜೆ, ಸುಳ್ಯ ಸಹಿತ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಮೋಡ, ಸೆಕೆಯ ವಾತಾವರಣ ಇದೆ.

ನಿನ್ನೆಯಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಕೆಲವು ಭಾಗದಲ್ಲಿ ಇಂದು ಮುಂಜಾನೆ ಸಾಧಾರಣ ಮಳೆಯಾಗಿದೆ.


Share with

Leave a Reply

Your email address will not be published. Required fields are marked *