ಮಗಳು ತನ್ನ ಪ್ರೀತಿ ವಿಷ್ಯ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ತಂದೆ

Share with

ಪ್ರೀತಿ (love) ಅಂತ ಬಂದಾಗ ಹೆತ್ತವರ ಬಳಿ ಹೇಳಿದ್ರೆ ಏನು ಅಂದುಕೊಳ್ತಾರೆ, ಬೇಡ ಅಂದ್ರೆ ಏನ್ ಮಾಡೋದು ಹೀಗೆ ನಾನಾ ರೀತಿಯ ಪ್ರಶ್ನೆ ಕಾಡುತ್ತದೆ. ಆದರೆ ಕೆಲವರು ಧೈರ್ಯ ಮಾಡಿಕೊಂಡು ಪ್ರೀತಿ ವಿಷ್ಯ ತಂದೆ ತಾಯಿ ಮುಂದೇ ಹೇಳುವುದನ್ನು ನೋಡಬಹುದು. ಆದರೆ ಇಲ್ಲೊಬ್ಬಳು ಮಗಳು ತನ್ನ ತಂದೆ (father) ಮುಂದೆ ತನಗೆ ಬಾಯ್ ಫ್ರೆಂಡ್ ಇರುವುದಾಗಿ ಹೇಳಿದ್ದಾಳೆ. ಮಗಳ ಮಾತು ಕೇಳಿ ಜೋರಾಗಿ ನಕ್ಕು ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

driiiishtiiii) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಗಳು ತಂದೆಯ ಕೈ ಹಿಡಿದುಕೊಂಡು ತನ್ನ ಪ್ರೀತಿ ವಿಷ್ಯ ಹೇಳುತ್ತಿರುವುದನ್ನು ನೋಡಬಹುದು. ತಂದೆ ಕೈ ಹಿಡಿದುಕೊಂಡು ನನಗೆ ಬಾಯ್‌ಫ್ರೆಂಡ್‌ ಇದ್ದಾನೆ ಪಪ್ಪ ಎಂದು ಹೇಳುತ್ತಾಳೆ. ಆದರೆ ಈ ಯುವತಿಯ ಧ್ವನಿಯಲ್ಲಿ ಭಯ ಹಾಗೂ ದುಃಖ ಎರಡು ಎದ್ದು ಕಾಣುತ್ತಿದೆ. ಆಗ ತಂದೆ ಇರಲಿ ಬಿಡು, ಅದರಲ್ಲೇನಿದೆ, ಎಲ್ಲರೂ ಪ್ರೀತಿ ಮಾಡ್ತಾರೆ, ನಾನು ಮಾಡಿದ್ದೆ, ನಿಮ್ಮಮ್ಮನೂ ಮಾಡಿದ್ರು ಎಂದು ನಗುತ್ತಾ ಹೇಳುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ



ಆ ಬಳಿಕ ಮಗಳು ಹನ್ನೊಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳುತ್ತಿದ್ದಂತೆ ತಂದೆ ನಗುತ್ತಲೇ ಎಲ್ಲವನ್ನೂ ಕೇಳಿಸಿಕೊಂಡಿದ್ದು, ಹುಡುಗನ ಫೋಟೊ ತೋರಿಸು ಎಂದು ಹೇಳಿ ತಂದೆ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಡಿಯೋ 1.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾದ ಕ್ಷಣ, ಅದ್ಭುತ ಸ್ಟೋರಿ ಎಂದಿದ್ದಾರೆ. ಇನ್ನೊಬ್ಬರು, ಬೆಂಬಲ ನೀಡುವ ಹಾಗೂ ಮುದ್ದಾದ ಕುಟುಂಬ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾವನಾತ್ಮಕ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *