ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

Share with

ಕಲ್ಲಡ್ಕ : ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ರವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಂದ ಶಾಲೆಯಿಂದ  ವೀರಕಂಬ ಗ್ರಾಮ ಪಂಚಾಯತಿ ನ ತನಕ ಪ್ರಭಾತ ಭೇರಿ ನೆರವೇರಿತು ಈ ಕಾರ್ಯಕ್ರಮಕ್ಕೆ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರು ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್, ,ಕಾರ್ಯದರ್ಶಿ ರಾಮ್ ಪ್ರಸಾದ್ ಕೊಂಬಿಲ,ವೀರಕಂಭ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ಸುನಿಲ್, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ರಮೇಶ್ ಗೌಡ ಮೈರಾ, ವಿದ್ಯಾರ್ಥಿ ನಾಯಕಿ ಧನ್ವಿತ ಉಪಸ್ಥಿತರಿದ್ದರು.

ಹಿರಿಯ ಪ್ರಾಥಮಿಕ ಶಾಲೆ ಮಂಕುಡೆ ಇಲ್ಲಿಂದ ವರ್ಗಾವಣೆಗೊಂಡು ಬಂದ ದೈಹಿಕ ಶಿಕ್ಷಕರಾದ  ಇಂದುಶೇಖರ್ ಕುಲಾಲ್ ರವರನ್ನು ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ಪರವಾಗಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು 

ಶಾಲೆಯಲ್ಲಿ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ನೀಡಿ ಮಕ್ಕಳಲ್ಲಿ ಆಸಕ್ತಿದಾಯಕ ಅಭ್ಯಾಸಗಳನ್ನು ಮೂಡಿಸುವ ಸಲುವಾಗಿ ಎಸ್ ಎಲ್ ಸಿ ಕನ್ಸ್ಟ್ರಕ್ಷನ್ಸ್ ನೆಲ್ತೊಟ್ಟು ಅನಂತಾಡಿ ಇವರು ಶಾಲೆಗೆ ಸ್ಮಾರ್ಟ್ ಟಿವಿ ನೀಡಿ ಸಹಕರಿಸಿದರು ಅದನ್ನು ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮತ್ತು ಎಸ್ ಡಿ ಎಂ ಸಿ ಗೆ ಹಸ್ತಾಂತರಿಸಲಾಯಿತು

ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು,

ಸಂಘ ಸಂಸ್ಥೆಗಳು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ,ಹಾಗೂ ಶಾಲಾಭಿಮಾನಿಗಳು ವೈಯಕ್ತಿಕವಾಗಿ ಸಿಹಿ ತಿಂಡಿ ನೀಡಿ ಸಹಕರಿಸಿದರು.

ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ  ಸ್ವಾಗತಿಸಿ, ಶಿಕ್ಷಕಿ ಅನುಷಾ ವಂದಿಸಿ. ಶಿಕ್ಷಕಿ ಸಂಗೀತ ಶರ್ಮ  ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.


Share with

Leave a Reply

Your email address will not be published. Required fields are marked *