ದರ್ಶನ್ ಪ್ರಕರಣ ಎಫೆಕ್ಟ್.. ಕೈದಿಗಳಿಂದ ಹೆಚ್ಚಿದ ಬೇಡಿಕೆ!

Share with

ನಟ ದರ್ಶನ್ ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಮಗ್ & ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ತಮಗೂ ಬೀಡಿ, ಸಿಗರೇಟ್ & ತಂಬಾಕು ನೀಡುವಂತೆ ಬೆಳಗಾವಿಯ ಹಿಂಡಲಗಾ ಕಾರಾಗೃಹದ ಕೈದಿಗಳು ಪ್ರತಿಭಟಿಸಿದ್ದಾರೆಂದು ತಿಳಿದುಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಸಿಗರೇಟ್ ಸೇದಲು ಅವಕಾಶ ನೀಡಿದ್ದೀರಿ, ನಮಗೂ ಬೀಡಿ, ಸಿಗರೇಟ್ & ತಂಬಾಕು ಕೊಡಿ ಎಂದು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಉಪಾಹಾರ ಸೇವಿಸಲ್ಲ ಎಂದಿದ್ದರೆಂದು ವರದಿಯಾಗಿದೆ


Share with