ಕುಂಬಳೆ: ಕುಂಬಳೆ ಸರಕಾರಿ ಯುಪಿ ಶಾಲೆಯಲ್ಲಿ ದಸರಾ ನಾಡಹಬ್ಬ ಆಚರಿಸಲಾಯಿತು. ಯಕ್ಷಗಾನ ಕಲಾವಿದ ಮುರಳಿದರ ಯಾದವ್ ಉದ್ಘಾಟಿಸಿ ದಸರಾ ನಾಡಹಬ್ಬದ ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ನೀತಿ ಕಥೆಯನ್ನು ಹೇಳಿದರು.
ಸಮಾರಂಭದಲ್ಲಿ ಶಾಲಾ ಪಿಟಿಎ ಉಪಾಧ್ಯಕ್ಷ ವಿನೇಶ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಪಂಚಾಯತ್ ಸದಸ್ಯ ಪ್ರೇಮಾವತಿ, ಚಂದ್ರಾವತಿ ಟೀಚರ್, ಬಾಬು ಮಾಸ್ಟರ್, ಕಮಾಲುದ್ದೀನ್ ಮಾಸ್ಟರ್, ತುಷಾರ ಟೀಚರ್ ಮೊದಲಾದವರು ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯನಿ ದೇವಕಿ ಟೀಚರ್ ಸ್ವಾಗತಿಸಿ, ಶರತ್ ಕುಮಾರ್ ವಂದಿಸಿದರು.