ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ಬಳಿಕ ಇಡೀ ಕುಟುಂಬ ಶಾಕ್‌ಗೆ ಒಳಗಾಗಿದೆ. ಈ ಮಧ್ಯೆ ಸ್ಪಂದನಾ ಮೃತದೇಹವನ್ನು ಬ್ಯಾಂಕಾಕ್‌ನಿಂದ ತರುವ ವ್ಯವಸ್ಥೆಯಾಗಿದೆ ಎಂದು ವರದಿಯಾಗಿದೆ.
ಇಂದು ರಾತ್ರಿ 7 ಗಂಟೆಗೆ ವಿಮಾನದ ಮೂಲಕ ಪಾರ್ಥೀವ ಶರೀರ ರವಾನೆಯಾಗಲಿದೆ. ಮಧ್ಯರಾತ್ರಿ ವೇಳೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಹ ಆಗಮಿಸಲಿದೆ ಎಂದು ಹೇಳಲಾಗಿದೆ. ಆ ಬಳಿಕ ಸ್ಪಂದನಾ ಅವರ ಮಲ್ಲೇಶ್ವರಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದು ಬಂದಿದೆ.