ಡಿ.24: ಐಲ ಕ್ಷೇತ್ರದಲ್ಲಿ ದೊಡ್ಡ ರಂಗಪೂಜೆ ಹಾಗೂ ಬಲಿ ಉತ್ಸವ

Share with

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ ಹಾಗೂ ಬಲಿ ಉತ್ಸವ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಈ ತಿಂಗಳ 24ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೊಡ್ಡ ರಂಗಪೂಜೆ ಹಾಗೂ ಬಲಿ ಉತ್ಸವ

ಬೆಳಿಗ್ಗೆ 7ಕ್ಕೆ ನಿತ್ಯಪೂಜೆ, ಪ್ರಾರ್ಥನೆ, 7.30ರಿಂದ ಗಣಹೋಮ, ನಾಗತಂಬಿಲ, ಪರಿವಾರ ದೇವರುಗಳಿಗೆ ತಂಬಿಲ, 9.30ರಿಂದ 10.45ರ ತನಕ ಭಜನೆ, 10.45ರಿಂದ 12ರ ತನಕ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ರಿಂದ ಭಜನೆ, 6.30ಕ್ಕೆ ದೀಪಾರಾಧನೆ ಬಳಿಕ ಶಾಸ್ತಾರ ದೇವರಿಗೆ, ಮಹಾಗಣಪತಿಗೆ ರಂಗಪೂಜೆ, ರಾತ್ರಿ 7ಕ್ಕೆ ಹೂವಿನ ಪೂಜೆ, ಮಹಾಪೂಜೆ, 8ರಿಂದ ಮಾಗಣೆ ಕೂಟ, ದೊಡ್ಡ ರಂಗಪೂಜೆ, ವಿಶೇಷ ಬಲಿ ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *