ಉಪ್ಪಳ: ನ್ಯಾಷನಲ್ ವಿಶ್ವಕರ್ಮ ಫೆಡರೇಷನ್ [ಎನ್.ವಿ.ಎಫ್] ಕಾಸರಗೋಡು ಜಿಲ್ಲಾ ಸಮಿತಿಯ 14ನೇ ವರ್ಷದ ಜಿಲ್ಲಾ ಸಮ್ಮೇಳನ [ಕುಟುಂಬ ಸಂಗಮ] ಕಾರ್ಯಕ್ರಮ ಡಿ. 24ರಂದು ಕಾಸರಗೋಡು ಮುನ್ಸಿಫಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ರಾಷ್ಟ್ರೀಯ, ರಾಜ್ಯ, ಜಿಲ್ಲಾ ನೇತಾರರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ ಮತ್ತು ಪ್ಲಸ್ ಟು ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ.ಪ್ಲಸ್ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು, ಡಿ. 24ರಂದು ಬೆಳಿಗ್ಗೆ 9ಕ್ಕೆ ವಿವಿಧ ಸ್ಪರ್ಧೆಗಳು ನಡೆಯಲಿದೆ.




