ಉಪ್ಪಳ: ಅಟ್ಟೆಗೋಳಿ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ಭಕ್ತ ವೃಂದ ಇದರ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಭಜನೋತ್ಸವ 24ರಂದು ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಶುದ್ದಿ ಕಲಶ, 7.30ಕ್ಕೆ ಗಣಹೋಮ, 9ಕ್ಕೆ ದೀಪ ಪ್ರತಿಷ್ಟೆ ವಿವಿಧ ತಂಡಗಳಿಂದ ಭಜನೆ ಆರಂಭ, ಮಧ್ಯಾಹ್ನ 12.30ರಿಂದ 2ರತನಕ ಅನ್ನದಾನ, ರಾತ್ರಿ 10.30ಕ್ಕೆ ಭಜನೋತ್ಸವದ ಮಂಗಳ ನಡೆಯಲಿದೆ.