ಕಾಸರಗೋಡು: ಕೇಳುಗುಡ್ಡೆ ಅಯ್ಯಪ್ಪ ನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 40ನೇ ವಾರ್ಷಿಕ ಮಹೋತ್ಸವ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಡಿ.27ರಿಂದ 31ರ ವರೆಗೆ ಜರಗಲಿದೆ.
ಡಿ.27ರಂದು ಬೆಳಿಗ್ಗೆ 8.00 ಗಂಟೆಗೆ ಉಗ್ರಾಣ ತುಂಬಿಸುವುದು (ಹಸಿರುವಾಣಿ ಮೆರವಣಿಗೆಯು ಶ್ರೀಶೈಲ ಮಹಾದೇವ ದೇವಸ್ಥಾನ ದೇವರಗುಡ್ಡೆಯಿಂದ ಹೊರಡುವುದು), ಡಿ.28ರಂದು ಬೆಳಿಗ್ಗೆ 8.00 ಗಂಟೆಗೆ ಗಣಪತಿ ಹೋಮ, ಶುದ್ದಿಕಲಶ, ಮಧ್ಯಾಹ್ನ 12.30ಕ್ಕೆ ಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಸಭೆಯ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಪವನ್ ಕುಮಾರ್ ಬಿ.ಕೆ. ವಹಿಸಲಿದ್ದಾರೆ.
ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ತ್ರ, ತಂತ್ರಿವರ್ಯರು ಆಶೀರ್ವಚನ ನೀಡಲಿದ್ದಾರೆ. ಹಿಂದೂ ಐಕ್ಯವೇದಿ-ಕೇರಳ ಕಾರ್ಯಕಾರಿ ಅಧ್ಯಕ್ಷ ಶ್ರೀ ವತ್ಸನ್ ತಿಲ್ಲಂಗೇರಿ ಧಾರ್ಮಿಕ ಭಾಷಣ ನೀಡಲಿದ್ದಾರೆ. ‘ಸೂರ್ಯಕಾಂತಂ’ ಝೀ ತೆಲುಗು ಧಾರಾವಾಹಿ ನಟ ಕೌಶಿಕ್‌ರಾಮ ಪಾಟಾಳಿ ಬಹುಮಾನ ವಿತರಣೆ ಮಾಡಲಿದ್ದಾರೆ. ಮಧೂರು ಪಂಚಾಯತು ಅಧ್ಯಕ್ಷ ಗೋಪಾಲಕೃಷ್ಣ, ಶ್ರೀ ಅಯ್ಯಪ್ಪ ಭಜನಾ ಮಂದಿರದ ಶ್ರೀಧರ ಗುರುಸ್ವಾಮಿ, ಶ್ರೀ ವಾಸು ಗುರುಸ್ವಾಮಿ, ಶಾಸ್ತಾ ಮಾತೃ ಸಮಿತಿ ಅಧ್ಯಕ್ಷೆ ರತ್ನಾ, ಪುಡಿಯೋದಿ ಭಗವತಿ ದೈವಸ್ಥಾನ ಹಿತ್ತಿಲು ರಾಘವ ಚೇರಾಲ್, ಆಯ್ಯಪ್ಪನಗರ, ಕೇಳುಗುಡ್ಡೆ ಬಂಬ ಸಂತಾನ ತರವಾಡು ಬಾಬು ನಾಯ್ಕ, ಸಣ್ಣಕೂಡ್ಲು ಚಟ್ಲಗುತ್ತು ಪ್ರಭಾಕರ್ ಶೆಟ್ಟಿ, ಸೂರ್ಲು ಮಹಿಶಂದಾಯ ಮೂಕಾಂಬಿಕಾ ಗುಳಿಗ ಪರಿವಾರ ದೈವಸ್ಥಾನದ ಅಂಗಾರ, ಕೋಮರಾಯ ನಲಿಕೆ ದೈವ ತರವಾಡಿನ ಗಣೇಶ್ ಕುಚ್ಚಿಕ್ಕಾಡು, ಸಣ್ಣಕೊಡ್ಲು ಕೊರಗಜ್ಜ ಸನ್ನಿಧಿ ರಾಜಶೇಖರ, ಸಣ್ಣಕೂಡ್ಲು ಪುಧೀಯೋದಿ ಭಗವತಿ ದೈವಸ್ಥಾನದ ಕೃಷ್ಣ ಭಂಡಾರಿಯವರು ಉಪಸ್ದಿತರಿರಲಿದ್ದಾರೆ.
ರಾತ್ರಿ 7.00ಕ್ಕೆ ದೀಪ ಪ್ರತಿಷ್ಠೆ, ಭಜನೆ (ಶ್ರೀ ಶಾಸ್ತಾ ಮಾತೃ ಸಮಿತಿ), ರಾತ್ರಿ 8.00ಕ್ಕೆ : ಪೂಜೆ, ಪ್ರಸಾದ ವಿತರಣೆ ನಡೆದು ರಾತ್ರಿ 8.30ಕ್ಕೆ ಶಾಸ್ತಾ ಬಾಲಗೋಕುಲ ಹಾಗೂ ಶ್ರೀ ಭಗವತಿ ಬಾಲಗೋಕುಲ ಇವರಿಂದ ‘ನೃತ್ಯ ವೈಭವ’ ಜರಗಲಿದೆ.
ಡಿ.29ರಂದು 7 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 8.00 ಗಂಟೆಗೆ ಶಾಸ್ತಾ ಅಷ್ಟೋತ್ತರ ಶತನಾಮಾವಳಿ (ಶ್ರೀ ಶಾಸ್ತಾ ಬಾಲಗೋಕುಲ ಹಾಗೂ ಶ್ರೀ ಭಗವತಿ ಬಾಲಗೋಕುಲದ ಮಕ್ಕಳಿಂದ), ಬೆಳಿಗ್ಗೆ 9.00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ 9.30 ಗಂಟೆಗೆ ನಾಗ ತಂಬಿಲ, ಆಶ್ಲೇಷ ಬಲಿ, ಮಧ್ಯಾಹ್ನ 12.30ಕ್ಕೆ ಪೂಜೆ, ಪ್ರಸಾದ ವಿತರಣೆ ಪಡೆದು ಬಳಿಕ ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ಜರಗಲಿದೆ. ಮಧ್ಯಾಹ್ನ 1.30ರಿಂದ ಅಲಾಮೂರ್ತಿ-ಶ್ರೀಕೃಷ್ಣ – ಯಕ್ಷಗಾನ ಬಯಲಾಟ (ಆಯ್ಯಪ್ಪ ನಗರ ಕೇಳುಗುಡ್ಡೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ನಾಟ್ಯ ತರಬೇತಿ ಕಲಾವಿದರಿಂದ) ರಾತ್ರಿ 7.30ರಿಂದ ದೀಪ ಪ್ರತಿಷ್ಠೆ, ಶ್ರೀ ಶಾಸ್ತಾ ಬಾಲಗೋಕುಲ ಹಾಗೂ ಶ್ರೀ ಭಗವತಿ ಬಾಲಗೋಕುಲ ಇವರಿಂದ ಭಜನೆ, ರಾತ್ರಿ 8 ಗಂಟೆಗೆ ಸಹಸ್ರ ದೀಪೋತ್ಸವ, ರಾತ್ರಿ 8.30ಕ್ಕೆ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ರಾತ್ರಿ 9 ಗಂಟೆಗೆ ಶ್ರೀ ಶಾಸ್ತಾ ಸ್ಪೋರ್ಟ್ಸ್ ಕ್ಲಬ್, ವೀರ ಸಾವರ್ಕರ್ ಫ್ರೆಂಡ್ಸ್ ಸಣ್ಣಕೂಡ್ಲು ಫ್ರೆಂಡ್ಸ್ ವೀರ ಕೇಸರಿ ಫ್ರೆಂಡ್ಸ್, ಧರ್ಮಶಾಸ್ತಾ ಸ್ಪೋರ್ಟ್ಸ್ ಕ್ಲಬ್, ರೋಯಲ್ ಬ್ರದರ್ಸ್, ತತ್ವಮಸಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ರಸಮಂಜರಿ
(ಮಿಲೇನಿಯಮ್ ಸ್ಟಾರ್ಸ್ ಮಂಗಳೂರು – ಇವರಿಂದ ಮ್ಯೂಸಿಕಲ್ ನೈಟ್) ಜರಗಲಿದೆ.
ಡಿ.30ರಂದು ಬೆಳಿಗ್ಗೆ 7.00 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 9.00 ಗಂಟೆಗೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಪ್ರಾರಂಭಗೊಳ್ಳಲಿದೆ.
ಬಳಿಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 1.00 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕೂಡ್ಲು ಮತ್ತು ಬಳಗದವರಿಂದ ‘ಭಕ್ತಿಗಾನ ಸುಧಾ’, ಸಾಯಂಕಾಲ 6.10ಕ್ಕೆ ದೀಪ ಪ್ರತಿಷ್ಠೆ,
ಭಜನೆ (ವಿವಿಧ ಭಜನಾ ಸಂಘದವರಿಂದ), ಸಾಯಂಕಾಲ 7.00ಕ್ಕೆ ಶೋಭಾಯಾತ್ರೆ (ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವುದು – ಅಯ್ಯಪ್ಪ ನಗರದ ಎಲ್ಲಾ ಸಂಘಸಂಸ್ಥೆಗಳಿಂದ, ಬಾಲಗೋಕುಲ, ಮಾತೃ ಸಮಿತಿ ಮತ್ತು ಎಲ್ಲಾ ಕುಟುಂಬ ಶ್ರೀಯವರ ಸಹಭಾಗಿತ್ವದೊಂದಿಗೆ) ಹುಲ್ಪೆ ಮೆರವಣಿಗೆಯಲ್ಲಿ ತಿಂಗಾರಿ ಮೇಳ, ಮುತ್ತುಕೊಡೆ, ಚೆಂಡೆ ವಾದ್ಯ ಇತ್ಯಾದಿಗಳು ಇರುತ್ತದೆ. ರಾತ್ರಿ 12.30 ಮಹಾಪೂಜೆ, ಪ್ರಸಾದ ವಿತರಣೆಯಾಗಲಿದೆ.
ಡಿ.30ರಂದು ವಿಶೇಷ ಸಿಡಿಮದ್ದು ಪ್ರದರ್ಶನಗೊಳ್ಳಲಿದೆ.
ಡಿ.31ರಂದು ಸೂರ್ಯೋದಯಕ್ಕೆ ದೀಪ ವಿಸರ್ಜನೆ, ಮಂಗಳಂ ಆಗಲಿದೆ ಎಂದು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.