ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 47ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಡಿ.16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 6ಕ್ಕೆ ಗಣಹೋಮ, 6.30ಕ್ಕೆ ಹರಿನಾಮ ಸಂಕೀರ್ತನ, 8ಕ್ಕೆ ನಿತ್ಯಪೂಜೆ, 9.30ಕ್ಕೆ ಸಾಮೂಹಿಕ ಶನೈಶ್ಚರ ಪೂಜೆ, ಪೂರ್ವಾಹ್ನ 11.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಸಂಜೆ 6ರ ತನಕ ವಿವಿಧ ತಂಡಗಳಿಂದ ಭಜನೆ, ಸಂಜೆ 6ಕ್ಕೆ ವಾಮಂಜೂರು ಶ್ರೀ ಶಾಸ್ತಾವೇಶ್ವರ ಕ್ಷೇತ್ರದಿಂದ ಶ್ರೀ ಅಯ್ಯಪ್ಪ ಘೋಷ ಯಾತ್ರೆ, 7ರಿಂದ 8ರ ತನಕ ಕುಣಿತ ಭಜನೆ, ರಾತ್ರಿ 8ರಿಂದ 9ರ ತನಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ, ರಾತ್ರಿ 9ಕ್ಕೆ ಪಡಿಪೂಜೆ, 9.15ಕ್ಕೆ ಶ್ರೀ ಅಯ್ಯಪ್ಪನ್ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.