ಮಂಗಳೂರು: ಉಡುಪಿ, ಮಂಗಳೂರು ಭಾಗದ ವೈದ್ಯಕೀಯ ಪ್ರತಿನಿಧಿಗಳಿಗಾಗಿ ಜಾಲಿ ಫ್ರೆಂಡ್ಸ್ ವತಿಯಿಂದ ಓವರ್ ಆರ್ಮ್ & ಅಂಡರ್ ಆರ್ಮ್ ಜೆಪಿಎಲ್ ಜಾಲಿ ಪ್ರೀಮಿಯರ್ ಲೀಗ್-2023, ಜಾಲಿ ಫಾರ್ಮಾ ಟ್ರೋಫಿ ಡಿ.2,3 ಹಾಗೂ ಡಿ.9, 10ರಂದು ಸಹ್ಯಾದ್ರಿ ಕ್ಯಾಂಪಸ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಈ ಪ್ರಯುಕ್ತ ಪಂದ್ಯಾವಳಿಯ ಟ್ರೋಫಿ ಹಾಗೂ ಜೆರ್ಸಿ ಉದ್ಘಾಟನೆಯನ್ನು ಬೋಂದೆಲ್‌ನ ಕರ್ನಾಟಕ ಕ್ಷತ್ರೀಯ ಮರಾಟ ಪರಿಷತ್ ಮುಂಭಾಗದಲ್ಲಿರುವ ಹುಡ್ಕೊ ಮೈದಾನದಲ್ಲಿ ನ.27ರಂದು ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಪ್ರಸಾದ್, ಲೋಕೇಶ್, ಸೋಮನಾಥ್ ಶೆಟ್ಟಿ, ಮಹೇಶ್ ಭಾಗವಹಿಸಿದ್ದರು. ಅಂಜನ್ ಕುಮಾರ್ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.