ಡ್ರೋನ್ ಪ್ರತಾಪ್ ಸೋಲು: ಅರ್ಧ ಗಡ್ಡ, ಮೀಸೆ ತೆಗೆದ ಕಡಬದ ಯುವಕ..!

Share with

ಕಡಬ: ಬಿಗ್ ಬಾಸ್ ಕನ್ನಡ ಸೀಸನ್ 10 ರ ರಿಯಾಲಿಟಿ ಶೋಗೆ ತೆರೆ ಬಿದ್ದಿದ್ದು, ನಟ ಕಾರ್ತಿಕ್ ಮಹೇಶ್‌ಗೆ ವಿನ್ನರ್ ಮತ್ತು ‘ಡ್ರೋನ್’ ಪ್ರತಾಪ್ ಅವರು ರನ್ನರ್‌ ಅಪ್ ಆಗಿ ಹೊರಹೊಮ್ಮಿದ್ದಾರೆ. ಈ ನಡುವೆ ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ಟ್ರೋಫಿ ಕೈ ತಪ್ಪಿದ್ದಕ್ಕೆ ಅಭಿಮಾನಿಯೋರ್ವ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡಿದ್ದು, ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಅವರು ಬಿಗ್‌ ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಗೆದ್ದು ಬರುತ್ತಾರೆ, ಸೋತರೆ ಅರ್ಧ ಗಡ್ಡ ಮತ್ತು ಅರ್ಧ ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿದ್ದರು. ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೂಂದು ವೀಡಿಯೋ ಹರಿಯಬಿಟ್ಟಿದ್ದರು. ಬಿಗ್ ಬಾಸ್‌’ ಕನ್ನಡ ಸೀಸನ್ 10 ರ ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ, ಝೈನುಲ್ ಅವರು ಅರ್ಧ ಮೀಸೆ ಮತ್ತು ಅರ್ಧ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. “ಇನ್ನು ಮಾತಾಡಿ ಪ್ರಯೋಜನವಿಲ್ಲ.. ನಾನು ಕೊಟ್ಟ ಮಾತನ್ನು ತಪ್ಪಿದವನಲ್ಲ . ನನಗೆ ತುಂಬ ಭಯಂಕರ ಬೇಜಾರು ಆಗುತ್ತಿದೆ..” ಎಂದು ಹೇಳುತ್ತ ಅರ್ಧ ಮೀಸೆ ಮತ್ತು ಗಡ್ಡವನ್ನು ಟ್ರಿಮ್ಮರ್‌ನಿಂದ ತೆಗೆದು ಹಾಕಿದ್ದಾರೆ. ಇದನ್ನು ವಿಡಿಯೋ ಮಾಡಿ, ಅದನ್ನೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರ್ಧ ಮೀಸೆ ಮತ್ತು ಗಡ್ಡ ತೆಗೆಯುವುದರ ಜೊತೆಗೆ ಹಸಿ ಮೆಣಸಿನಕಾಯಿಯನ್ನು ಕೂಡ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿದೆ.


Share with

Leave a Reply

Your email address will not be published. Required fields are marked *