ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು 24 ಗಂಟೆಗಳೊಳಗೆ ಮುಗಿಸಬೇಕು ಎಂಬ ನಿಯಮ ಮಾಡಿದ್ದರೂ ಕಂಬಳ ಮುಕ್ತಾಯಗೊಳ್ಳುವಲ್ಲಿ ವಿಳಂಬವಾಗುತ್ತಲೇ ಇದೆ.

ಕಂಬಳ ವಿಳಂಬವನ್ನು ಗಮನಿಸಿ ಜಿಲ್ಲಾ ಕಂಬಳ ಸಮಿತಿಯ ಈ ಹಿಂದೆ ಸಭೆ ನಡೆಸಿ ನಿರ್ಧಾರ ಕೈಗೊಂಡಂತೆ 24ರಿಂದ 30 ಗಂಟೆಯೊಳಗೆ ಕಂಬಳ ಮುಗಿಸಬೇಕು. ಇದಕ್ಕೆ ಸಮಿತಿಯು ಮಾರ್ಗಸೂಚಿಯನ್ನೂ ನೀಡಿತ್ತು. ಆದರೆ ಇದು ಕಂಬಳದಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.
ಕಂಬಳದಲ್ಲಿ ಗಂತಿಗೆ ಕೋಣ ಗಳು ಆಗಮಿಸಲು ಮತ್ತು ಕೋಣಗಳನ್ನು ಬಿಡಲು ಪ್ರತೀ ವಿಭಾಗಗಳಿಗೆ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಇದನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿಲ್ಲ. ಈ ಎಲ್ಲ ಕಾರಣಕ್ಕೆ ಎ. 4ರಂದು ಆರಂಭಗೊಂಡ ಗುರುಪುರ ಕಂಬಳವು ಗರಿಷ್ಠ ವಿಳಂಬ ಕಂಡಿದೆ.




