ಪೈವಳಿಕೆ-ಚೇವಾರು ರಸ್ತೆ ಸಂಗಮಿಸುವ ರಸ್ತೆಯಲ್ಲಿ ನಿರಂತರ ಅಪಘಾತ: ವೇಗತೆ ಕಡಿಮೆಗೊಳಿಸಲು ನಿಯಂತ್ರಕ ಸ್ಥಾಪನೆಗೆ ಒತ್ತಾಯ

Share with

ಉಪ್ಪಳ: ಪೈವಳಿಕೆ-ಚೇವಾರು ರಸ್ತೆ ಸಂಗಮಿಸುವಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ವೇಗತೆಯನ್ನು ನಿಯಂತ್ರಿಸುವ ವ್ಯವಸ್ಥೆ ಹಾಗೂ ಅಪಘಾತ ವಲಯ ನಾಮಫಲಕವನ್ನು ಅಳವಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಪೈವಳಿಕೆ-ಚೇವಾರು ರಸ್ತೆ ಸಂಗಮಿಸುವ ರಸ್ತೆ.

ಮಲೆನಾಡ ಹೆದ್ದಾರಿ ಚೇವಾರ್ ರಸ್ತೆಯಿಂದ ಕೈಕಂಬ -ಬಾಯಾರ್ ರಸ್ತೆಯ ಪೈವಳಿಕೆ ಸಂಗಮಿಸುವಲ್ಲಿ ಕೈಕಂಬ, ಬಾಯಾರು, ಚೇವಾರು ಮೂರು ಕಡೆಗಳಿಂದ ಆಗಮಿಸುವ ವಾಹನಗಳು ನಿರಂತರ ಅಪಘಾತಕ್ಕೀಡಾಗುತ್ತಿದ್ದು, ಇದರಿಂದ ವಾಹನ ಸವಾರರು ಆತಂಕಗೊಂಡಿದ್ದಾರೆ. ಈ ಪ್ರದೇಷದಲ್ಲಿ ಡಿವೈಡರ್ ಅಥವಾ ಬಾರಿಕ್ಕೇಡ್ ಇರಿಸಿ ವಾಹನಗಳ ವೇಗತೆಯನ್ನು ಕಡಿಮೆಗೊಳಿಸಬೇಕೆಂದು ಊರವರು ಆಗ್ರಹಿಸಿದೆ.

ಹಿಂದೆ ಬುಲೋರ ಮತ್ತು ಆಟೋರಿಕ್ಷಾ ಮಧ್ಯೆ ಅಪಘಾತ ನಡೆದು ರಿಕ್ಷಾ ಚಾಲಕ ಗಾಯಗೊಂಡಿದೆ. ಜೀಪ್ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಹಾಗೂ ಸಣ್ಣಪುಟ್ಟ ಹಲವು ಅಪಘಾತಗಳು ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಊರವರು ಪೈವಳಿಕೆಯಲ್ಲಿರುವ ಕೈಕಂಬ-ಬಾಯಾರು ರಸ್ತೆ ಸಂಚಾರ ಸಹಾಯಕೇಂದ್ರ ಮತ್ತು ನಿರ್ವಹಣೆ ಕಚೇರಿ ಅಧಿಕಾರಿಗಳಿಗೆ ಹಾಗೂ ಮಲನಾಡ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೂ ಮನವಿಯನ್ನು ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ವ್ಯವಸ್ಥೆಯನ್ನು ಮಾಡಬೇಕೆಂದು ಊರವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *