ಉಪ್ಪಳ: ಪ್ರತಾಪನಗರದಲ್ಲಿ ಕುಡಿನೀರು ಪೋಲಾಗುತ್ತಿದ್ದು, ಪೈಪ್ ದುರಸ್ಥಿಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಶಿವಶಕ್ತಿ ಕ್ಲಬ್ ಪರಿಸರದಲ್ಲಿ ಹೊಸ ವಿದ್ಯುತ್ ಕಂಬ ಹಾಕಲು ಹೊಂಡ ತೋಡುತ್ತಿದ್ದಾಗ ಪೈಪ್ ಹಾನಿಗೀಡಾಗಿದ್ದು, ಬಳಿಕ ಸಿಬ್ಬಂದಿಗಳು ದುರಸ್ಥಿಗೊಳಿಸಿ ಕಂಬವನ್ನು ಅಳವಡಿಸಿದ್ದಾರೆ. ಆದರೆ ಮತ್ತೆ ಅದೇ ಪೈಪ್ ಬಿರುಕು ಬಿಟ್ಟು ನೀರು ಪೋಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಬೇಕೂರು ಟ್ಯಾಂಕ್ ನಿಂದ ವಿತರಿಸಲಾಗುತ್ತಿರುವ ಕುಡಿನೀರು ಇದಾಗಿದೆ. ಈಗಾಗಲೇ ಬಾವಿ ಸಹಿತ ಹೊಳೆಯಲ್ಲಿ ನೀರಿನ ಮಟ್ಟ ಕಡಿಮೆಗೊಂಡಿದೆ. ಸಂಬAಧಪಟ್ಟ ಇಲಾಖೆ ಉದ್ಯೋಗಸ್ಥರು ಪೈಪ್ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ