ಮಳೆಗೆ ಕುಸಿದು ಬಿದ್ದ ಸಾರ್ವಜನಿಕ ಬಾವಿ ದುರಸ್ಥಿಗೆ ಒತ್ತಾಯ

Share with


ಉಪ್ಪಳ: ಕುಸಿದು ಬಿದ್ದ ಸಾರ್ವಜನಿಕ ಬಾವಿಯನ್ನು ದುರಸ್ಥಿಗೆ ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ 2ನೇ ವಾರ್ಡ್ ಉಪ್ಪಳ ಭಗವತೀ ಗೇಟ್ ಬಳಿಯಲ್ಲಿರುವ ಸಾರ್ವಜನಿಕ ಬಾವಿ ಜುಲೈ ತಿಂಗಳಲ್ಲಿ ಭಾರೀ ಮಳೆಗೆ ಕುಸಿದು ಬಿದ್ದು ಉಪಯೋಗ ಶೂನ್ಯಗೊಂಡಿದೆ.  ಇದರಿಂದ ಸ್ಥಳೀಯರಲ್ಲಿ ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂದು ದೂರಲಾಗಿದೆ. ಹಲವಾರು ವರ್ಷಗಳಿಂದ ಬೇಸಿಗೆ, ಮಳೆಗಾಲದಲ್ಲೂ ಹಲವಾರು ಕುಟುಂಬಗಳಿಗೆ ನೀರಿಗೆ ಆಶ್ರಯವಾಗಿದ್ದ ಬಾವಿ ಕುಸಿದು ಬಿದ್ದಿರುವುದು ನೀರಿನ ಸಮಸ್ಯೆಗೆ ಕಾರಣವಾಗಿರುವುದಾಗಿ ದೂರಲಾಗಿದೆ.   ಇದರ  ದುರಸ್ಥಿಗೆ ಊರವರು ಪಂಚಾಯತ್‌ಗೆ ಮನವಿಯನ್ನು ನೀಡಿದರೂ ದುರಸ್ಥಿಗೆ ಕ್ರಮಉಂಟಾಗಲಿಲ್ಲ. ಸ್ಥಳಕ್ಕೆ ಜನಪ್ರತಿನಿಧಿ ಹಾಗೂ ಪಂಚಾಯತ್ ಅಧಿಕಾರಿಗಳು ತಲುಪಿ ಮಾಹಿತಿ ಸಂಗ್ರಹಿಸಿಕೊoಡಿದ್ದರೂ ದುರಸ್ಥಿ ಬಗ್ಗೆ ಕ್ರಮಕೈಗೊಳ್ಳದಿರುವುದು ಊರವರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.  ಈಗಾಗಲೇ ಬಾವಿ, ಹೊಳೆಗಳಲ್ಲಿ ನಿರಿನ ಮಟ್ಟ ಕಡಿಮೆಗೊಂಡಿದ್ದು, ಮೂಂದೆ ನೀರಿನ ಸಮಸ್ಯೆ ವ್ಯಾಪಕಗೊಳ್ಳಲಿದ್ದು, ಶೀಘ್ರದಲ್ಲಿ ಬಾವಿಯ ದುರಸ್ಥಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *