ಉಪ್ಪಳ ಬಸ್ ನಿಲ್ದಾಣ ಪ್ರವೇಶಿಸುವ ಹೆದ್ದಾರಿಯಲ್ಲಿ ಸೂಚನಾ ಫಲಕ ಸ್ಥಾಪಿಸಲು ಒತ್ತಾಯ

Share with

ಉಪ್ಪಳ: ಹೆದ್ದಾರಿಯಿಂದ ಉಪ್ಪಳ ಬಸ್‌ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸುವ ವೇಳೆ ಇತರ ವಾಹನಗಳ ಮಧ್ಯೆ ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಸೂಚನಾ ಫಲಕ ಸ್ಥಾಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆದ್ದಾರಿಯಿಂದ ಉಪ್ಪಳ ಬಸ್‌ನಿಲ್ದಾಣಕ್ಕೆ ಪ್ರವೇಶಿಸುವ ಬಸ್‌ಗಳು

ಮಂಗಲ್ಪಾಡಿ ಪಂಚಾಯತ್‌ನ ಆಧೀನದಲ್ಲಿರುವ ಉಪ್ಪಳ ಬಸ್ ನಿಲ್ದಾಣದಲ್ಲಿ ಸ್ಥಳದ ಕೊರತೆಯಿಂದ ಇಕ್ಕಟ್ಟಾಗಿ ಬಸ್ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವಂತೆ ಬಸ್ ಹೆದ್ದಾರಿಯಿಂದ ಒಳಗೂ, ಹೊರಕ್ಕೂ ಹೋಗುವ ವೇಳೆ ಹೆದ್ದಾರಿಯಲ್ಲಿ ಇತರ ವಾಹನಗಳ ಮಧ್ಯೆ ಅಪಘಾತ ಉಂಟಾಗುತ್ತಿರುವುದು ಬಸ್ ಸಿಬ್ಬಂದಿಗಳಿಗೆ, ಇತರ ವಾಹನ ಸವಾರರಿಗೆ ಸಂಕಷ್ಟ ಉಂಟುಮಾಡಿದೆ. ಬಸ್ ನಿಲ್ದಾಣ ದ ಹೆದ್ದಾರಿ ಬದಿಯಲ್ಲಿ ಬಸ್‌ನಿಲ್ದಾಣ ಇದೆ ಎಂಬ ಯಾವುದೇ ಸೂಚನಾ ಫಲಕ ಇಲ್ಲದಿರುವುದೆ ಅಪಘಾತಕ್ಕೆ ಕಾರಣವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದೆ.

ಕಾಸರಗೋಡು, ಮಂಗಳೂರು, ಪೆರ್ಮುದೆ, ಮೀಯಪದವು, ಬಾಯಾರು ಕಣ್ಣೂರು ಭಾಗದಿಂದ ಒಟ್ಟು ಸುಮಾರು 200 ಬಸ್‌ಗಳು ದಿನನಿತ್ಯ ಉಪ್ಪಳ ಬಸ್‌ನಿಲ್ದಾಣಕ್ಕೆ ಬಂದು ಹೋಗುತ್ತಿದೆ. ಹೆದ್ದಾರಿಯಿಂದ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ವೇಳೆ ಹಿಂಬದಿಯಿಂದ ಬರುವ ಇತರ ವಾಹನ ಚಾಲಕರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿರುವುದಾಗಿ ದೂರಲಾಗಿದೆ. ಅನ್ಯ ರಾಜ್ಯಗಳಿಂದ ಮಂಗಳೂರು, ಕಾಸರಗೋಡು ಭಾಗಗಕ್ಕೆ ತೆರಳುವ ವಾಹನಗಳ ಚಾಲಕರಿಗೂ ಸಮಸ್ಯೆ ಕಾಡುತ್ತಿದೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ತುರ್ತಾಗಿ ಬಸ್ ನಿಲ್ದಾಣದ ಹೆದ್ದಾರಿಯಲ್ಲಿ ಎರಡೂ ಭಾಗದಲ್ಲೂ ಸೂಚನಾ ಫಲ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದೆ.


Share with

Leave a Reply

Your email address will not be published. Required fields are marked *