ಪುತ್ತೂರು : ಪುತ್ತೂರು ಸಂಪ್ಯ ಇಲ್ಲಿನ ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ “ಇನ್ವಿಕ್ತ” ಕಾಮರ್ಸ್ ಅಸೋಸಿಯೇಷನ್ ಹಾಗು ಐಕ್ಯೂಎಸಿ
ಸಹಯೋಗದೊಂದಿಗೆ ಇಂಟ್ರಾಕ್ಲಾಸ್ ಕಾಮರ್ಸ್ ಫೆಸ್ಟ್ ಆ. 5 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿಯಾದ ಶ್ರೀಯುತ ಅರ್ಪಿತ್ ಟಿ
ಎ ಇವರು ಒಂದು ತರಗತಿಯೊಳಗೆ ನಡೆಯುವ ಸ್ಪರ್ಧೆಗಳು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಹಾಗೂ ಬೌದ್ಧಿಕ ಚಟುವಟಿಕೆಗಳಿಗೆ
ಉತ್ತೇಜನ ಕೊಡುವುದು. ಸಹಪಾಠಿಗಳೊಂದಿಗಿನ ಸ್ಪರ್ಧೆಯು ವಿದ್ಯಾರ್ಥಿಗಳ ಹಿಂಜರಿಕೆ ಗುಣದಲ್ಲಿ ಮಹತ್ತರ ಬದಲಾವಣೆ ತಂದು
ಧೈರ್ಯ ತುಂಬಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಶ್ರೀಯುತ ಕಿಶೋರ್ ಕುಮಾರ್ ರೈ ಕೆ ಇವರು
ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ವಿವಿಧ ರೀತಿಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ನೀಲಿ ನಕ್ಷೆಯ ಬಗ್ಗೆ
ವಿವರಿಸಿದರು. ವಿದ್ಯಾರ್ಥಿಯು ತನ್ನನ್ನು ತಾನು ಸಕ್ರಿಯವಾಗಿ ಸ್ಪರ್ಧಾತ್ಮಕವಾಗಿ ತೊಡಗಿಸಿಕೊಂಡರೆ ಯಶಸ್ಸು ಸಿಗುವುದು ಹಾಗೂ
ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಸಲ್ಪಡುತ್ತವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಕೊನೆಯದಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, “ಇನ್ವಿಕ್ತ” ಕಾಮರ್ಸ್ ಅಸೋಸಿಯೇಷನ್ ಇದರ ಸಂಯೋಜಕಿಯಾದ ಭವ್ಯಶ್ರೀ ಬಿ
ಇವರು ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕರಾದ ಶ್ರೀಯುತ ರಾಕೇಶ್ ಕೆ ಇವರು ವಂದಿಸಿದರೆ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘಶ್ರೀ
ಇವರು ಕಾರ್ಯಕ್ರಮವನ್ನು ನಿರೂಪಿಸಿದರು.