Kasaragod: ಅಗಲಿದ ಮಾಜಿ ಮುಖ್ಯಮಂತ್ರಿಯ ವಿರುದ್ಧ ಅವಹೇಳನಕಾರಿ ಪೋಸ್ಟ್..; ಜಿಲ್ಲೆಯಲ್ಲಿ ಕೇಸು ದಾಖಲು

Share with

ಕಾಸರಗೋಡು: ಅಗಲಿದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಅವರನ್ನು ಅವಹೇಳನಗೈದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದು ಈ ಕುರಿತಾಗಿ ಕಾಸರಗೋಡು ಜಿಲ್ಲೆಯಲ್ಲಿ 3 ಕೇಸು ದಾಖಲಿಸಲಾಗಿದೆ.

ಸಾಮಾಜಿಕ ಮಾದ್ಯಮಗಳ ಮೂಲಕ ರಾಜಕೀಯ, ಕೋಮು ಘರ್ಷಣೆ ನಡೆಸಲು ಹುನ್ನಾರ ಎಂಬ ರೀತಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಸಿಪಿಎಂ ಕುಂಬಳೆ ಲೋಕಲ್ ಕಾರ್ಯದರ್ಶಿ ಯೂಸೆಫ್ ನೀಡಿದ ದೂರಿನಂತೆ ಕೊಯ್ದಾಡಿ ಪೆರುವಾಡ್ ನಿವಾಸಿ ಅಬ್ದುಲ್ಲ ಕುಞ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ ಎ೦ದು ಪೊಲೀಸರು ತಿಳಿಸಿದ್ದಾರೆ. ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಳ್ಳಿಕ್ಕರೆ ನಿವಾಸಿ ಫೈಸು ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ವಿದೇಶದಲ್ಲಿ ಉದ್ಯೋಗಿಯಾಗಿದ್ದಾನೆ. ವಿ.ಎಸ್.ಅಚ್ಚುತಾನಂದನ್ ರನ್ನು ಅವಮಾನಿಸುವ ರೀತಿಯ ವಾಟ್ಸಾಪ್ ಸ್ಟೇಟಸ್ ಹಾಕಿದ ಪಾಲಿಟ್ಟೋನ್ ನಿವಾಸಿ ರಶೀದ್ ಮೊಯ್ದಿನ್ ಎಂಬಾತನ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಘರ್ಷಣೆಗೆ ಕಾರಣವಾಗುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟುಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *