ನಿರಂತರವಾಗಿ ಮುಂದುವರೆದ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶ

Share with

ಬೆಳ್ತಂಗಡಿ: ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು, ಗುರುವಾರ ರಾತ್ರಿ ಕಲಂಜ ಗ್ರಾಮದ ಬೆರ್ಕೆ ನಿವಾಸಿಯಾಗಿರುವ ಪ್ರಶಾಂತ್ ಕಾಕತ್ಕಾರ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು ತೋಟದಲ್ಲಿದ್ದ ಬಾಳೆ ಗಿಡಗಳನ್ನು ನಾಶಗೊಳಿಸಿವೆ.

ಎರಡು ದಿನಗಳ ಹಿಂದೆ ಕಾಡಾನೆಗಳು ಧರ್ಮಸ್ಥಳ ನೇರ್ತನೆ ಪರಿಸರದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿತ್ತು. ಮಿತ್ತಬಾಗಿಲು ಗ್ರಾಮದಲ್ಲಿಯೂ ಕಾಡಾನೆಗಳ ಹಾವಳಿಯಿಂದ ನಿರಂತರ ಕೃಷಿ ಹಾನಿಯಾಗುತ್ತಿದೆ.
ಕಳೆದ ಹಲವಾರು ದಿನಗಳಿಂದ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕು ಸೇರಿದಂತೆ ಇನ್ನಿತರ ಕಡೆ ಆನೆಗಳ ಹಾವಳಿಗಳಿಂದ ರೈತರು ಕಂಗೆಟ್ಟಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *