ದ.ಕ ಕ್ಷೇತ್ರದಲ್ಲಿ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ: ವಿಧಾನಸಭಾ ಕ್ಷೇತ್ರವಾರು ಪಡೆದ ಫಲಿತಾಂಶದ ವಿವರ

Share with

ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಅಂತ್ಯಗೊಂಡಿದ್ದು, ದ.ಕ ಕ್ಷೇತ್ರದ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು 1, 49,208 ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಚೌಟ ಅವರು 7,64,132 ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು 6,14,924 ಮತ ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ 4,232 ಮತ ಗಳಿಸಿದ್ದಾರೆ. ಕರುನಾಡ ಸೇವಕರ ಪಾರ್ಟಿ ಅಭ್ಯರ್ಥಿ ದುರ್ಗಾ ಪ್ರಸಾದ್ 2,592 ಮತಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ 1,901 ಮತಗಳಿಸಿದ್ದು, ಪಕ್ಷೇತರ ಅಭ್ಯರ್ಥಿ ಮ್ಯಾಕ್ಸಿಮ್ ಪಿಂಟೊ 1,690 ಮತ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೊ 976, ಉತ್ತಮ ಪ್ರಜಾಕೀಯ ಪಾರ್ಟಿ ಪ್ರಜಾಕೀಯ ಮನೋಹರ್ 971, ಕರ್ನಾಟಕ ರಾಷ್ಟ್ರ ಸಮಿತಿ ರಂಜಿನಿ ಎಂ 776 ಮತಗಳಿಸಿದ್ದಾರೆ. ನೋಟಾಗೆ 23,576 ಮತ ಚಲಾವಣೆ ಆಗಿದೆ.

ವಿಧಾನಸಭಾ ಕ್ಷೇತ್ರವಾರು ಪಡೆದ ಮತಗಳು

1 ಬೆಳ್ತಂಗಡಿ
ಬ್ರಿಜೇಶ್: 1,01,408 ಪದ್ಮರಾಜ್: 78,101
2 ಮೂಡಬಿದಿರೆ
ಬ್ರಿಜೇಶ್: 92,496 ಪದ್ಮರಾಜ್: 64,308
3 ಮಂಗಳೂರು ಉತ್ತರ:
ಬ್ರಿಜೇಶ್: 1,08,137 ಪದ್ಮರಾಜ್: 76,716
4 ಮಂಗಳೂರು ದಕ್ಷಿಣ
ಬ್ರಿಜೇಶ್: 95,531 ಪದ್ಮರಾಜ್: 71,187
5 ಮಂಗಳೂರು
ಬ್ರಿಜೇಶ್: 64,870 ಪದ್ಮರಾಜ್: 97,933
6 ಬಂಟ್ವಾಳ
ಬ್ರಿಜೇಶ್: 94,679 ಪದ್ಮರಾಜ್: 88,686
7 ಪುತ್ತೂರು
ಬ್ರಿಜೇಶ್: 100,247 ಪದ್ಮರಾಜ್: 71,557
8 ಸುಳ್ಯ
ಬ್ರಿಜೇಶ್: 1,02,762 ಪದ್ಮರಾಜ್: 63,615


Share with

Leave a Reply

Your email address will not be published. Required fields are marked *