ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರೀ ಹಾಗೂ ಡಿ.೧೭ರಂದು ಆರಂಭಗೊಂಡ ಧನುರ್ಮಾಸ ಪೂಜೋತ್ಸವ ಭಾನುವಾರ ಬೆಳಿಗ್ಗೆ ಬಹಳ ಅದ್ದೂರಿಯಾಗಿ ಸಮಾಪ್ತಿಗೊಂಡಿತು. ಕ್ಷೇತ್ರದಲ್ಲಿ ಮುಂಜಾನೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ತಂತ್ರಿಗಳ ಆಗಮನದೊಂದಿಗೆ ವಿಶೇಷ ದೀಪೋತ್ಸವ ಆರಂಭಗೊಂಡಿತು ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಉಪಹಾರ ನಡೆಯಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.