ಉಜಿರೆ: ಅಕ್ಟೋಬರ್ 29ರಂದು ಉಜಿರೆಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬೃಹತ್ ಮಟ್ಟದ ಧರ್ಮ ಸಂರಕ್ಷಣಾ ಪಾದಯಾತ್ರೆ ನಡೆಯಲಿದ್ದು ಈ ಧರ್ಮ ಸಂರಕ್ಷಣಾ ರಥಯಾತ್ರೆ ನಡೆಯಲಿದ್ದು ಇದರ ಪೋಸ್ಟರ್ ಬಿಡುಗಡೆಯು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಅ.21ರಂದು ನಡೆಯಿತು. ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡ್ವೆಟ್ನಾಯ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಧರ್ಮಜಾಗೃತಿ ಸಮಿತಿ ಪ್ರಧಾನ ಸಂಚಾಲಕರಾಗಿ ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಪೂರನ್ ವರ್ಮ, ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್, ಉದ್ಯಮಿಗಳಾದ ಮೋಹನ್ ಶೆಟ್ಟಿಗಾರ್, ರಾಜೇಶ್ ಪೈ, ಅರವಿಂದ್ ಕಾರಂತ್, ಯೋಜನೆ ಅಧಿಕಾರಿ ಸುರೇಂದ್ರ, ರಾಘವೇಂದ್ರ ಬೈಪಡಿತ್ತಾಯ, ರವಿಚಕ್ಕಿತ್ತಾಯಾ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.